ಮೋಸ್ಟ್ ವಾಂಟೆಡ್ ಪಾತಕಿ ರವಿ ಪೂಜಾರಿ ಇಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಲ್ಲಿ ಅರೆಸ್ಟ್ ಆಗಿದ್ದಾನೆ. ಇವನ ಹಿನ್ನೆಲೆಯನ್ನ ನೋಡುವುದಾದರೆ ಭೂಗತ ಪಾತಕಿ ಆಗಿರುವ ರವಿ ಪೂಜಾರಿ ಆಸ್ಟ್ರೇಲಿಯಾದಲ್ಲಿ ವಾಸವಿದ್ದ. ಮುಂಬೈನ ಅಂಧೇರಿಯಲ್ಲಿ ಭೂಗತ ಜಗತ್ತಿಗೆ ಕಾಲಿಟ್ಟಿದ್ದ ರವಿ ಪೂಜಾರಿ ಚಿಕ್ಕ ವಯಸ್ಸಿನಲ್ಲೇ ಶಾಲೆ ಬಿಟ್ಟು ಕ್ರಿಮಿನಲ್ ಆ್ಯಕ್ಟಿವಿಟೀಸ್ನಲ್ಲಿ ಭಾಗಿಯಾದ. ರವಿ ಪೂಜಾರಿ ಸಣ್ಣಪುಟ್ಟ ಕೊಲೆ ಮಾಡಿ ಹೆಸರು ವಾಸಿಯಾಗಿದ್ದ. ರವಿಪೂಜಾರಿ, ಬಾಲ ಸಾಲ್ತೆ ಕೊಲೆ ಮಾಡಿ ಚೋಟಾ ರಾಜನ್ ಶಿಷ್ಯನಾಗಿದ್ದ. ರವಿ ಪೂಜಾರಿ 1990 ರಲ್ಲಿ ದುಬೈನ ರಿಯಲ್ ಎಸ್ಟೇಟ್ ದಂಧೆಯಲ್ಲಿ ಭಾಗಿಯಾಗಿದ್ದ. ರವಿ ಪೂಜಾರಿಗೆ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳನ್ನ ನಿರರ್ಗಳವಾಗಿ ಮಾತನಾಡಬಲ್ಲ. 2000 ಇಸ್ವಿ ಆಸು ಪಾಸಿನಲ್ಲಿ ದಾವೂದ್ ಇಬ್ರಾಹಿಂನಿಂದ ಛೋಟಾ ರಾಜನ್ ಸುಪಾರಿ ನೀಡಿದ್ದ ಹಿನ್ನೆಲೆಯಲ್ಲಿ ರವಿ ಪೂಜಾರಿ ಛೋಟಾ ರಾಜನ್ನಿಂದ ದೂರ ಉಳಿದಿದ್ದ. ರವಿ ಪೂಜಾರಿಯ ಮೊದಲ ಟಾರ್ಗೆಟ್ ಬಾಲಿವುಡ್ ನಟರಾಗಿದ್ದರು. ಬಾಲಿವುಡ್ ಫೇಮಸ್ ನಟಿ ಕರೀಶ್ಮಾ ಕಪೂರ್ ಹಾಗೂ ಆಕೆಯ ಪತಿ ಸಂಜಯ್ ಕಪೂರ್ಗೆ ಬೆದರಿಕೆ ಹಾಕಿ ₹ 50 ಕೋಟಿ ಡಿಮ್ಯಾಂಡ್ ಮಾಡಿದ್ದ.ಇದನ್ನೂ ಓದಿ: ಭೂಗತ ಪಾತಕಿ ರವಿ ಪೂಜಾರಿ ಕೊನೆಗೂ ಅರೆಸ್ಟ್..!ವೈಯಕ್ತಿಕ ಹಿನ್ನೆಲೆ:ರವಿ ಪೂಜಾರಿ, ರವಿ ಅಂತಾಲೇ ಫೇಮಸ್ ಆಗಿದ್ದ. ಪದ್ಮಾ ಪೂಜಾರಿ ಎಂಬುವರೊಂದಿಗೆ ವಿವಾಹವಾಗಿದ್ದ ರವಿ ಪೂಜಾರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಇದ್ದಾನೆ. ಇತ್ತೀಚೆಗೆ ಕೇಸ್ ಒಂದರಲ್ಲಿ ಮಗನನ್ನ ಬಂಧಿಸಲಾಗಿತ್ತು. ಸದ್ಯ ಆತ ಬೇಲ್ ನಿಂದ ಹೊರ ಬಂದಿದ್ದಾನೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





