ಮಂಡ್ಯ, ಫೆಬ್ರವರಿ 16: ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 42 ಯೋಧರು ಹುತಾತ್ಮರಾಗಿದ್ದಾರೆ. ದೇಶವೇ ಸೂತಕದಲ್ಲಿ ಮುಳುಗಿದೆ.ಪುಲ್ವಾಮಾ ದಾಳಿ LIVE : 12.30ಕ್ಕೆ ಎಚ್‌ಎಎಲ್‌ಗೆ ಪಾರ್ಥಿವ ಶರೀರವೀರಮರಣವಪ್ಪಿದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಭಾರತೀಯ ಜೀವ ವಿಮಾ ನಿಗಮ ತಕ್ಷಣ ವಿಮಾ ಮೊತ್ತವನ್ನು ತಲುಪಿಸಿದೆ. ಯಾವುದೇ ದಾಖಲೆ, ಮರಣ ಪ್ರಮಾಣ ಪತ್ರವನ್ನೂ ಕೇಳದೆ LIC ಮಂಡ್ಯ ಬ್ರಾಂಚ್ ನಿಂದ ನಾಮಿನಿ ಖಾತೆಗೆ 3,82,199 ರೂ ವಿಮೆ ಮರಣದಾವೆ ಮೊತ್ತವನ್ನು ನೀಡಿದೆ.ಪುಲ್ವಾಮಾ ದಾಳಿ ರೂವಾರಿ ಅಬ್ದುಲ್ ರಶೀದ್ ಗಾಜಿ ಸುಳಿವು ಪತ್ತೆಯಾವುದೇ ದಾಖಲೆಯನ್ನೂ ಕೇಳದೆ LIC ಹಣ ನೀಡಿದೆ. ಪಾಲಿಸಿ ನಂ 725974544ನಲ್ಲಿ ಯೋಧ ಗುರು ವಿಮೆ ಮಾಡಿಸಿದ್ದು, ಅವರು ಹುತಾತ್ಮರಾಗಿದ್ದ ವಿಚಾರ ತಿಳಿಯುತ್ತಿದ್ದಂತೆ ನಾಮಿನಿ ಖಾತೆಗೆ ಹಣ ವರ್ಗಾವಣೆ ಮಾಡಿದೆ.ಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರುಎಲ್‌ಐಸಿ ಕಾರ್ಯಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವೀರಯೋಧ ಗುರು ಅವರ ಪಾರ್ಥಿವ ಶರೀರ ಬರಲಿದೆ. ಅಂತಿಮ ವಿಧಿ ವಿಧಾನಗಳು ಮಂಡ್ಯದಲ್ಲಿ ನಡೆಯಲಿದೆ. ಮಂಡ್ಯದ ಕೆಎಂ ದೊಡ್ಡಿ ಸೇರಿದಂತೆ ಹಲವು ಕಡೆ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:Bigtvnewsಕನ್ನಡ
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





