Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಕಾಂಗ್ರೆಸ್​ನ ಯಾವ ನಾಯಕರೂ ಸಮಲತಾ ಜೊತೆ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಮಂಡ್ಯ: ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್​​ನಿಂದ ಟಿಕೆಟ್ ನೀಡಲು ಸಾಧ್ಯವಿಲ್ಲ ಅಂತ ನಾನು ಮೊದಲೇ ಹೇಳಿದ್ದೇನೆ. ಯಾವ ಕಾಂಗ್ರೆಸ್ ನಾಯಕರೂ ಸುಮಲತಾ ಹಿಂದೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ದೆಹಲಿಯಲ್ಲಿ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲಾ ನಾಯಕರ ಸಭೆ ಕರೆದಿರುವುದು ನನಗೆ ಗೊತ್ತಿಲ್ಲ. ಜೆಡಿಎಸ್​ಗೆ ಹಂಚಿಕೆಯಾಗುವ ಕ್ಷೇತ್ರದಲ್ಲಿ ಇಂತವರನ್ನೇ ಅಭ್ಯರ್ಥಿ ಹಾಕಿ ಅಂತಾ ನಾವು ಹೇಳಲು ಸಾಧ್ಯವಿಲ್ಲ. ಹಾಗೆಯೇ ಅಭ್ಯರ್ಥಿಗಳ‌ ಆಯ್ಕೆ ವಿಚಾರದಲ್ಲಿ ಜೆಡಿಎಸ್ ನವರು ನಮಗೆ ಹೇಳೋಕೆ ಆಗಲ್ಲ ಎಂದರು.ಸುಮಲತಾ ರಾಜಕೀಯ ನಡೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸುಮಲತಾಗೆ ಕಾಂಗ್ರೆಸ್ ಟಿಕೆಟ್ ಇಲ್ಲ ಅಂತಾ ಹೇಳಿದವನೇ ನಾನು. ನಾನು ಹೇಗೆ ಪರೋಕ್ಷವಾಗಿ ಅವರನ್ನ ಬೆಂಬಲಿಸುತ್ತೇನೆ. ಕುಟುಂಬ ರಾಜಕಾರಣ ಮೈತ್ರಿ ಮೇಲೆ ದುಷ್ಪರಿಣಾಮ ಬೀರಲ್ಲ. ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ ಪ್ರಜ್ವಲ್ ನಿಲ್ಲಿಸೋದು ಜೆಡಿಎಸ್ ನಿರ್ಧಾರ. ಅವರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾವು ಹೇಳಲಾಗದು ಎಂದು ಸ್ಪಷ್ಟನೆ ನೀಡಿದರು.#Siddaramaiah #Sumalatha #Loksabha #Election #Mandya

Share News

About Shaikh BIG TV NEWS, Hubballi

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *