ಬೆಂಗಳೂರು: ಐಪಿಎಲ್ 12ನೇ ಸೀಸನ್ ಇಂದಿನಿಂದ ಆರಂಭವಾಗಲಿದೆ. ಅದ್ರಲ್ಲು ಮೊದಲ ಪಂದ್ಯದಲ್ಲೇ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಫಸ್ಟ್ ಮ್ಯಾಚ್ನಲ್ಲಿ ಎದುರಾಗಲಿದ್ದು, ಹೈವೋಲ್ಟೇಜ್ ಪಂದ್ಯ ಎನಿಸಿಕೊಂಡಿದೆ.ಈ ಮಧ್ಯೆ ಮೊದಲ ಪಂದ್ಯದಲ್ಲೆ ಕೊಹ್ಲಿ ಹಾಗೂ ರೈನಾ ವಿಶೇಷ ದಾಖಲೆ ಬರೆಯಲು ಉತ್ಸುಕರಾಗಿದ್ದಾರೆ. ಐಪಿಎಲ್ ಐತಿಹಾಸದ ಸ್ಕೋರ್ಬೋರ್ಡ್ನಲ್ಲಿ 5000ದ ಗಡಿ ದಾಟಲು ಇಬ್ಬರು ಸಜ್ಜಾಗಿದ್ದು, ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಸಿಎಸ್ಕೆ ತಂಡದ ಬ್ಯಾಟ್ಸ್ಮನ್ ಸುರೇಶ್ ರೈನಾಗೆ ಈ ಸಾಧನೆ ಮಾಡಲು ಕೇವಲ 15 ರನ್ಗಳ ಅವಶ್ಯಕತೆಯಿದೆ.ಐಪಿಎಲ್ನಲ್ಲಿ ಒಟ್ಟು 176 ಪಂದ್ಯಗಳನ್ನು ಆಡಿರುವ ರೈನಾ 4985 ರನ್ ಬಾರಿಸಿ ಅತಿಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೇವಲ 15 ರನ್ ಬಾರಿಸಿದರೆ ರೈನಾ ಐಪಿಎಲ್ ಇತಿಹಾಸದಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.ಇನ್ನು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ 5 ಸಾವಿರ ರನ್ಗಳ ಸನಿಹದಲ್ಲಿದ್ದಾರೆ. 163 ಪಂದ್ಯಗಳನ್ನು ಆಡಿರುವ ಕೊಹ್ಲಿ ಒಟ್ಟು 4948 ರನ್ ಬಾರಿಸಿದ್ದಾರೆ. ಕೊಹ್ಲಿ ಸಿಎಸ್ಕೆ ವಿರುದ್ಧದ ಮೊದಲ ಪಂದ್ಯದಲ್ಲಿ 42 ರನ್ ಗಳಿಸಿದ್ರೆ 5 ಸಾವಿರ ರನ್ ಬಾರಿಸಿದ ಸಾಧನೆ ಮಾಡಲಿದ್ದಾರೆ. ಸದ್ಯ ಈ ವಿಚಾರದಲ್ಲಿ ಸುರೇಶ್ ರೈನಾ ಹಾಗೂ ವಿರಾಟ್ ಕೊಹ್ಲಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಯಾರು ಮೊದಲು 5 ಸಾವಿರ ರನ್ಗಳ ಗಡಿ ಮುಟ್ಟಲಿದ್ದಾರೆ ಅನ್ನೋ ಕುತೂಹಲಕ್ಕೆ ಇಂದಿನ ಪಂದ್ಯದಲ್ಲಿ ಉತ್ತರ ಸಿಗಲಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





