ವಾರಣಾಸಿ: ಕಾಂಗ್ರೆಸ್ನ ಸ್ಟಾರ್ ಕ್ಯಾಂಪೇನರ್ ಹಾಗೂ ಯುಪಿ ಕಾಂಗ್ರೆಸ್ ಜನರಲ್ ಸೆಕ್ರಟರಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ, ಪೂಜಾ ಸ್ಥಳವನ್ನ ಅಪವಿತ್ರಗೊಳಿಸಿ, ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ವಕೀಲರೊಬ್ಬರು ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ವಾರಣಾಸಿ ಮೂಲದ ವಕೀಲ ತ್ರಿಪಾಠಿ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಕೋರ್ಟ್ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ಇನ್ನೂ ಈ ಸಂಬಂಧ ಅರ್ಜಿ ವಿಚಾರಣೆಯನ್ನ ಕೈಗೆತ್ತಿಕೊಂಡ ಕೋರ್ಟ್ ಈ ಬಗ್ಗೆ ಏಪ್ರಿಲ್ 12ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.ಪ್ರಿಯಾಂಕಾ ಗಾಂಧಿ ಮಾರ್ಚ್ 20ರಂದು ಕಾಶಿ ವಿಶ್ವನಾಥನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು. ಆದರೆ, ಪ್ರಿಯಾಂಕ ಗಾಂಧಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದು, ಮಾಂಸಹಾರಿಯಾಗಿದ್ದಾರೆ. ಹಿಂದೂ ಸಂಪ್ರದಾಯಗಳನ್ನ ಪಾಲಿಸದೇ ಕಾಶಿವಿಶ್ವನಾಥನ ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಹೀಗಾಗಿ ಇಂಡಿಯನ್ ಪಿನಲ್ ಕೋಡ್ 419 ವಂಚನೆ ಹಾಗೂ ನಕಲು ಆರೋಪ, 295 ಧಾರ್ಮಿಕ ಭಾವನೆ ಕೆರಳಿಸುವುದು, 295A ಧರ್ಮಕ್ಕೆ ಮಾಡಿದ ಅಪಮಾನ ಹಾಗೂ ಅವಮಾನ ಎಸಗುವ ಯತ್ನ ಸೆಕ್ಷನ್ಗಳಡಿ ಕೋರ್ಟ್ ದೂರಿನಲ್ಲಿ ದಾಖಲಿಸಲಾಗಿದೆ ಎಂದು ತ್ರಿಪಾಠಿ ತಿಳಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





