ಮಂಡ್ಯ: ಚುನಾವಣೆಯಲ್ಲಿ ಹಣ ಬಲ, ತೋಳ್ಬಲ ಇರೋರೇ ಗೆಲ್ಲೋದು ಅನ್ನೋ ಮಾತು ಸಾಮಾನ್ಯವಾಗಿ ಕೇಳಿ ಬರ್ತಾನೇ ಇರುತ್ತೆ. ಅದ್ರಲ್ಲೂ ಕೆಲ ಅಭ್ಯರ್ಥಿಗಳಂತೂ ನೀರಿನಂತೆ ಹಣವನ್ನು ಹರಿಸ್ತಾನೇ ಇರ್ತಾರೆ. ಅಧಿಕಾರಿಗಳು ಕೂಡ ಬೆಸ್ತು ಬೀಳೋವಷ್ಟು ಹಣವನ್ನು ಕ್ರೋಡಿಕರಿಸಿ ಇಟ್ಟಿರ್ತಾರೆ. ಅಪ್ಪಿ ತಪ್ಪಿ ಸಿಕ್ಕಿ ಹಾಕಿಕೊಂಡಾಗಲೇ ಜನರಿಗೂ ಇದೇನಪ್ಪ ಈ ಮನುಷ್ಯ ಇಷ್ಟು ಹಣ ಇಟ್ಟವನೆ ಅಂತಾ ಗೊತ್ತಾಗುತ್ತೆ. ಹೀಗೆ ಕ್ರೋಡಿಕರಿಸಿದ ಹಣವನ್ನು ಆಯಾ ಪಕ್ಷಗಳು, ಅಭ್ಯರ್ಥಿಗಳು ಮತಗಳನ್ನು ಕೊಂಡುಕೊಳ್ಳಲು, ಮತದಾರರನ್ನು ಪ್ರೇರೇಪಿಸಲು ಬಳಸ್ತಾನೇ ಇರ್ತಾರೆ. ಆದ್ರೆ, ಇದಕ್ಕೆ ವಿರುದ್ಧವಾದ ಬೆಳವಣಿಗೆಯೊಂದು ಮಂಡ್ಯದಲ್ಲಿ ನಡೆದಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಧನ್ಯತಾಭಾವ ಅನುಭವಿಸಿದ್ದಾರೆ.ಅಷ್ಟಕ್ಕೂ ಆಗಿದ್ದು ಏನೆಂದ್ರೆ, ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಪ್ರಚಾರ ಆರಂಭಿಸಿದ್ದಾರೆ. ಶಿವಪುರದಿಂದ ಸುಮಲತಾ ಪ್ರಚಾರ ಆರಂಭಿಸಿದ್ದು, ತೆರೆದ ವಾಹನದಲ್ಲಿ ಅವರು ಸಾಗುತ್ತಿದ್ದರು. ಈ ವೇಳೆ ಸುಮಲತಾ ಅಂಬರೀಶ್ ವಾಹನದ ಬಳಿ ಬಂದ ಅಭಿಮಾನಿಗಳು, ಸ್ಥಳೀಯ ಮತದಾರರು ತಾವು ಕಷ್ಟ ಪಟ್ಟು ದುಡಿದ, ತಮ್ಮ ಬೆವರಿನ ದುಡಿಮೆಯನ್ನು ನೀಡಿದ್ದಾರೆ. ತಾವು ಕಷ್ಟ ಪಟ್ಟು ದುಡಿದ ₹5,000 ಹಣ ನೀಡಿದ್ದಾರೆ. ಅಷ್ಟೇ ಅಲ್ಲ ದಯವಿಟ್ಟು ಈ ಹಣವನ್ನು ನಿಮ್ಮ ಚುನಾವಣೆ ಖರ್ಚಿಗೆ ಬಳಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳು ನೀಡಿದ ಹಣವನ್ನ ಸೆರಗೊಡ್ಡಿ ಸುಮಲತಾ ತೆಗೆದುಕೊಂಡು ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಅಭಿಮಾನಿಗಳ ಪ್ರೀತಿಗೆ ತಲೆಬಾಗಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





