ಹುಬ್ಬಳ್ಳಿ: ಬಿಜೆಪಿ ಉಗ್ರಗಾಮಿಗಳ ಪಕ್ಷ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬ ಆಧಾರದ ಮೇಲೆ ಖರ್ಗೆ ಅವರು ಈ ಮಾತನ್ನು ಹೇಳಿರಬೇಕು. ಬಾಬಾ ಜಗಜೀವನ್ ರಾಮ್, ಅಂಬೇಡ್ಕರ್ ಹಾಗೂ ಸೀತಾರಾಮ್ ಅವರಿಗೆ ಘೋರವಾದ ಅನ್ಯಾಯ ಮಾಡಿದ್ದಾರೆ.
ಇವತ್ತು ಒಂದೇ ಒಂದು OBC ಪ್ರಧಾನ ಮಂತ್ರಿ ಮಾಡಿಲ್ಲ. ಎಲ್ಲವನ್ನು ನಕಲಿ ಗಾಂಧಿಗೆ ಮೀಸಲಿಟ್ಟಿದ್ದಾರೆ. ನೀವು ಆರ್ಟಿಕಲ್ 370 ಇಡ್ಕೊಂಡು ಭಯೋತ್ಪಾದಕರನ್ನು ಬೆಳೆಸಿದ್ದು ನಮಗೆ ಗೊತ್ತಿದೆ ಎಂದು ಮಲ್ಲಿಕಾರ್ಜುನ್ ಖರ್ಗೆಗೆ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

