ಚೆನ್ನೈ: ಟಿಕ್ಟಾಕ್ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಭಾರತದಲ್ಲಿ ದಿನಬೆಳಗಾಗುವುದರೊಳಗೆ ಖ್ಯಾತಿ ಗಳಿಸಿದ ಚೀನಾದ ಟಿಕ್ಟಾಕ್ ವಿಡಿಯೋ ಆ್ಯಪ್ಗೆ ನಿಷೇಧ ಇಲ್ಲ. ಈ ಸಂಬಂಧ ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದ್ದು, ಟಿಕ್ಟಾಕ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಅದರ ಮೇಲಿನ ನಿಷೇಧ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.ದೇಶಾದ್ಯಂತ ಟಿಕ್ಟಾಕ್ ಆ್ಯಪ್ ಬಳಕೆ ನಿಷೇಧಿಸಿ ಏಪ್ರಿಲ್ 22ರಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಜೊತೆಗೆ ಟಿಕ್ಟಾಕ್ ಆ್ಯಪ್ ನಿಷೇಧ ಸಂಬಂಧ ಮದ್ರಾಸ್ ಹೈಕೋರ್ಟ್ ತಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ ತಾನು ನಿಷೇಧವನ್ನ ತೆರವುಗೊಳಿಸುವುದಾಗಿ ಎಚ್ಚರಿಸಿತ್ತು.ಆನ್ಲೈನ್ ಸ್ಪೀಚ್ ಮತ್ತು ಸೋಷಿಯಲ್ ಮೀಡಿಯಾವನ್ನು ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯದ 19 (1) (a) ವಿಧಿಯಡಿ ಪರಿಗಣಿಸಲಾಗಿದೆ. ಹಾಗಾಗಿ ಅದನ್ನು ನಿಷೇಧಗೊಳಪಡಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ನ ಮದುರೈ ನ್ಯಾಯಪೀಠಕ್ಕೆ ಮನದಟ್ಟುಪಡಿಸಲಾಗಿ, ನ್ಯಾಯಪೀಠವು ಟಿಕ್ಟಾಕ್ ಆ್ಯಪ್ ಮೇಲಿನ ನಿಷೇಧವನ್ನು ವಾಪಸ್ ಪಡೆಯಿತು.ಏಪ್ರಿಲ್ 18ರಂದು, ಮದ್ರಾಸ್ ಹೈಕೋರ್ಟ್ ತೀರ್ಪಿನಂತೆ, ಟಿಕ್ಟಾಕ್ ಆ್ಯಪ್ ನಿಷೇಧದಿಂದ ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ಗಳಲ್ಲಿ ಆ್ಯಪ್ ಡೌನ್ಲೋಡ್ಗೆ ಕೇಂದ್ರ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿತ್ತು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





