ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಇನ್ನೂ ಒಂದು ಹಂತದ ಮತದಾನ ಬಾಕಿಯಿರುವಾಗಲೇ ಯಾರು ದೆಹಲಿ ಗದ್ದುಗೆ ಏರ್ತಾರೆ ಅನ್ನೋ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಟ್ವಿಟರ್ನಲ್ಲೂ ಈ ಬಗ್ಗೆ ಸಾಕಷ್ಟು ಸಮೀಕ್ಷೆಗಳ ಟ್ವೀಟ್ಸ್ ಹರಿದಾಡುತ್ತಿವೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗವು ಟ್ವಿಟರ್ ಇಂಡಿಯಾಗೆ ಖಡಕ್ ಸಂದೇಶ ರವಾನಿಸಿದೆ. ನೆಟ್ಟಿಗರು ಚುನಾವಣಾ ಸಮೀಕ್ಷೆ ಬಗ್ಗೆ ಪ್ರಕಟಿಸಿದ ಎಲ್ಲಾ ಟ್ವೀಟ್ಸ್ಗಳನ್ನು ಡಿಲಿಟ್ ಮಾಡುವಂತೆ ಟ್ವಿಟರ್ ಇಂಡಿಯಾಗೆ ಹೇಳಿದೆ. ಚುನಾವಣೆ ಮುಕ್ತಾಯಗೊಳ್ಳುವ ಮೊದಲು ಯಾವುದೇ ಫಲಿತಾಂಶದ ಸಮೀಕ್ಷೆ ಪ್ರಕಟಿಸಬಾರದು ಅಂತಾ ಚುನಾವಣಾ ಆಯೋಗ ಈ ಮೊದಲು ಕಡ್ಡಿ ಮುರಿದಂತೆ ಹೇಳಿತ್ತು. ಆದ್ರೂ ಟ್ವಿಟರ್ ಬಳಕೆದಾರರು ಸಮೀಕ್ಷೆ ಬಗ್ಗೆ ಪೋಸ್ಟ್ ಮಾಡಿದ್ದರು. ಸೆಕ್ಷನ್ 126 ‘ಎ’ ಪ್ರಕಾರ ಚುನಾವಣೆ ಮುಗಿಯದ ಹೊರತು ಯಾವ ವ್ಯಕ್ತಿಯೂ ಸಮೀಕ್ಷೆ ನಡೆಸಬಾರದು ಹಾಗೂ ಪ್ರಕಟಗೊಳಿಸಬಾರದು. ಒಂದು ವೇಳೆ ಇದರ ವಿರುದ್ಧವಾಗಿ ನಡೆದುಕೊಂಡ್ರೆ 2 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಶಿಕ್ಷೆಯೂ ಕೂಡ ಈ ನಿಯಮ ಒಳಗೊಂಡಿದೆ. ಈಗ ಚುನಾವಣಾ ಆಯೋಗ ಈ ಆದೇಶ ನೀಡಿರುವುದರಿಂದ ಸಮೀಕ್ಷೆ ಬಗ್ಗೆ ನೆಟ್ಟಿಗರು ಪ್ರಕಟಿಸಿದ ಎಲ್ಲಾ ಟ್ವೀಟ್ಗಳನ್ನು ಡಿಲಿಟ್ ಮಾಡುವ ಹೊಣೆಗಾರಿಕೆ ಟ್ವಿಟರ್ ಮೇಲೆ ಬಿದ್ದಿದೆ
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





