Breaking News

ಎಕೋಫಿಕ್ಸ್ ಡಾಂಬರೀಕರಣ ವೀಕ್ಷಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ

ಬೆಳಗಾವಿ: ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಬುಧವಾರ ನಗರದ ಕುಮಾರಸ್ವಾಮಿ ಬಡಾವಣೆಯ ಹತ್ತಿರ ರಸ್ತೆ ನಿರ್ಮಾಣ, ದುರಸ್ತಿಗೆ ಬಳಸಬಹುದಾದ ಎಕೋಫಿಕ್ಸ್ ಡಾಂಬರೀಕರಣ ಉತ್ಪನ್ನ ಬಳಕೆಯ ಅಣಕು ವೀಕ್ಷಿಸಿದರು.
ಎಕೋಫಿಕ್ಸ್ ಡಾಂಬರೀಕರಣ ಉತ್ಪನ್ನದಲ್ಲಿ ಆಧುನಿಕ ತಂತ್ರಜ್ಞಾನ ‌ಬಳಸಿಕೊಳ್ಳಲಾಗಿದೆ.
ಮಳೆ, ಚಳಿಮ ಬೇಸಿಗೆಯಲ್ಲೂ ಈ ಉತ್ಪನ್ನವನ್ನು ಬಳಕೆ ಮಾಡಬಹುದು. ರಸ್ತೆ ಗುಂಡಿಗಳ ತ್ವರಿತ ದುರಸ್ತಿಗಾಗಿ ಇದು ಅತೀ ಉಪಯುಕ್ತ. ಹೆದ್ದಾರಿ, ಸೇತುವೆ, ಪ್ಯಾಚ್ ವರ್ಕ್, ತಗ್ಗು ಪ್ರದೇಶದ ದುರಸ್ತಿ, ವಾಹನ ನಿಲುಗಡೆ ಸ್ಥಳ ನಿರ್ಮಾಣ ಹಾಗೂ ಇನ್ನಿತರ ರಸ್ತೆ ದುರಸ್ತಿ ಕಾಮಗಾರಿಗಳಿಗೆ ಎಕೋಫಿಕ್ಸ್ ಪ್ರೊಡಕ್ಟ್ ಬಳಸುವುದು ಸೂಕ್ತವಾಗಿದೆ’ ಎಂದು ಎಕೋಫಿಕ್ಸ್ ಪ್ರತಿನಿಧಿಗಳು ವಿವರಿಸಿದರು.
ಮೇಯರ್‌ ಸವಿತಾ ಕಾಂಬಳೆ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಸ್.ಎಸ್ ಸಬರದ, ನಗರ ಸೇವಕ ಸಂದೀಪ ಜೀರಗ್ಯಾಳ, ಪಾಲಿಕೆ ಅಧಿಕಾರಿಗಳು ಇದ್ದರು.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *