ನವದೆಹಲಿ: ಪ್ರಧಾನಿ ಮೋದಿಯ ಪ್ರಚಂಡ ಗೆಲುವು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳನ್ನ ಕಂಗಲಾಗಿಸಿದೆ. ಇನ್ನು ಮೋದಿ ಅಭಿಮಾನಿಗಳ ಸಂತೋಷಕ್ಕೆ ಪರಾವೆ ಇಲ್ಲದಂತಾಗಿದೆ. ಆದ್ರೆ ಬಿಜೆಪಿ ಬೆಂಬಲಿಗರಿಗೆ ಮಾತ್ರವಲ್ಲ ಷೇರುಮಾರುಕಟ್ಟೆ ಹೂಡಿಕೆದಾರರಿಗೂ ಮೋದಿ ಗೆಲುವು ಡಬಲ್ ಖುಷಿ ತಂದಿದೆ. ಹೌದು ಮೋದಿಯ ಅಭೂತಪೂರ್ವ ಗೆಲುವಿನಿಂದ ಷೇರುಪೇಟೆ ಹೂಡಿಕೆದಾರರಿಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಷೇರು ಮಾರುಕಟ್ಟೆಯಲ್ಲಾಗಿರುವ ವ್ಯವಹಾರದಲ್ಲಿ ಭರ್ಜರಿ ಏರಿಕೆ ಕಂಡಿದ್ದು, ಕೇವಲ ಎರಡು ದಿನಗಳಲ್ಲಿ ಹೂಡಿಕೆದಾರರ ಆದಾಯ 3.86 ಲಕ್ಷ ಕೋಟಿ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ. ಇನ್ನು ಎರಡು ದಿನಗಳಲ್ಲಿ ಸೆನ್ಸೆಕ್ಸ್ 871.9 ಪಾಯಿಂಟ್ಗಳಷ್ಟು ಏರಿಕೆ ಕಂಡಿದೆ. ಟಾಟಾ ಸ್ಟೀಲ್, ಯಸ್ ಬ್ಯಾಂಕ್, ಆಕ್ಸಿಸ್ ಹಾಗೂ ಎಸ್ಬಿಐ ಹೆಚ್ಚಿನ ಲಾಭವನ್ನ ಪಡೆದಿದೆ ಎಂದು ತಿಳಿದುಬಂದಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





