ಹಳಿಗಳ ಮೇಲೆ ಆನೆಯೊಂದು ಮರಿಗೆ ಜನ್ಮ ನೀಡಿದ್ದು, 2 ಗಂಟೆ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಜಾರ್ಖಂಡ್ ನಲ್ಲಿದೆ. ಕಾಡು ಆನೆಯೊಂದು ರೈಲ್ವೆ ಹಳಿಗಳ ಮೇಲೆ ತನ್ನ ಮರಿಗೆ ಜನ್ಮ ನೀಡಿದ್ದು, ರೈಲು ಸಂಚಾರ ಕೆಲಹೊತ್ತು ಸ್ಥಗಿತವಾಗಿತ್ತು. ಆನೆ ಮತ್ತು ಅದರ ನವಜಾತ ಮರಿ ಹೆರಿಗೆಯ ನಂತರ ಸುರಕ್ಷಿತವಾಗಿ ನಡೆದುಕೊಂಡು ಹೋಗಿದೆ.ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಮಾನವ-ಪ್ರಾಣಿಗಳ ಸಾಮರಸ್ಯದ ಅಸ್ತಿತ್ವದ ಈ ಉದಾಹರಣೆಯನ್ನು ಹಂಚಿಕೊಳ್ಳಲು ಸಂತೋಷವಾಗಿದೆ” ಎಂದು ಯಾದವ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ, ಜೊತೆಗೆ ಆ ಕ್ಷಣದ ಎರಡು ವೀಡಿಯೊಗಳನ್ನು ಸಹ ಪೋಸ್ಟ್ ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

