Breaking News

ಕೊಲೆ, ರಾಬರಿ ಸೇರಿದಂತೆ ಹಲವು ಪ್ರಕರಣಗಳ ಪ್ರಮುಖ ಆರೋಪಿಯ ಬಂದನ

ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಟೆಕ್ಕಿಗೆ ಚಾಕು ತೋರಿಸಿ ಅಡ್ಡಗಟ್ಟಿ ಎಟಿಂಎಂಗೆ ಕರೆದು ಕೊಂಡು ಹೋಗಿ ಹಣ ಡ್ರಾ ಮಾಡಿ ಕೊಡುವಂತೆ ಹೇಳಿ ಚಾಕುವಿನಿಂದ ಸುಮಾರು ೧೦ ಕಡೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದ ಆರೋಪಿಯ ಮೇಲೆ ಅತ್ತಿಬೆಲೆ ಠಾಣೆಯ ಸಿಪಿಐ ಗಿರೀಶ್ ಶೂಟ್ ಔಟ್ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸರಿಗೆ ರಾತ್ರಿ ಹಲ್ಲೆಯ ಖಚಿತ ಮಾಹಿತಿ ಮೇರೆಗೆ ರೌಡಿಶೀಟರ್ ಶಶಾಂಕ್(23) ನನ್ನು ಬಂಧಿಸಲು ತೆರಳಿದ್ದು ಈ ವೇಳೆ ಶಶಾಂಕ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು ಈ ವೇಳೆ ಪೊಲೀಸರು ಆರೋಪಿಯನ್ನು ಶರಣಾಗುವಂತೆ ತಿಳಿಸಿದ್ರ ಪುಂಡಾಟ ಮೇರೆದ ಆರೋಪಿಗೆ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಕೊನೆಗೆ ಶಶಾಂಕ್ ಬಾಲಗಾಲಿಗೆ ಮತ್ತೊಂದು ಗುಂಡು ಹಾರಿಸಿ ಬಂಧಿಸಿದ್ದಾರೆ. ಇನ್ನು ಆರೋಪಿ ಶಾಶಂಕ್ ಬನ್ನೇರುಘಟ್ಟ, ಹುಳಿಮಾವು, ಕೋಣನಕುಂಟೆ ಸೇರಿದಂತೆ ಬೇರೆ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ರಾಬರಿ ಸೇರಿಂದ ಹಲವು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ಶಾಶಂಕ್. ಕಾರ್ಯಾಚರಣೆಯಲ್ಲಿ ಅತ್ತಿಬೆಲೆ ಸಿಪಿಐ ಬಾಲಾಜಿ ಎಸ್.ಐ. ಮುರಳೀಧರ ಹಾಗೂ ತಂಡ ಭಾಗವಹಿಸಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೇ ಸ್ಥಳಕ್ಕೆ ಅಡಿಷನಲ್ ಎಸ್ಪಿ ಸುಜಿತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About Ambrish BIG TV NEWS,Anekal

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *