ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ರಾಮಯ್ಯ ಕಾಲೋನಿಯಲ್ಲಿ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ. ಬನ್ನಾರಿ ಅವರ ಪುತ್ರ ಕೆ.ಬಿ. ಸ್ವತಂತ್ರ(24) ಅವರೇ ತನ್ನ ಮನೆಯ ಮೇಲ್ಬಾಗದ ಕೊಠಡಿಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆಗೆ ಬಲಿಯಾದ ಯುವಕನಾಗಿದ್ದಾನೆ. ಕೆ.ಆರ್.ಪೇಟೆ ಪುರಸಭೆಯ ವಸತಿ ಯೋಜನಾ ವಿಭಾಗದಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕೆ.ಬಿ.ಸ್ವತಂತ್ರ ನಿನ್ನೆ ಮಧ್ಯಾಹ್ನ ಜ್ವರ ಮತ್ತು ಕೆಮ್ಮು ಇದ್ದ ಕಾರಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ವೈಧ್ಯರನ್ನು ಭೇಟಿ ಮಾಡಲು ಸರತಿಯ ಸಾಲಿನಲ್ಲಿ ನಿಂತಿದ್ದಾಗ, ಸಾಲಿನಲ್ಲಿ ತನ್ನ ಮುಂಭಾಗದಲ್ಲಿ ಚಿಕಿತ್ಸೆ ಪಡೆಯಲು ವೈದ್ಯರನ್ನು ಭೇಟಿ ಮಾಡಲು ನಿಂತಿದ್ದ ಮಹಿಳೆ ಸಕಾರಣವಿಲ್ಲದೇ ಎಲ್ಲರೆದುರು ನಿಂಧಿಸಿ ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದ ಕಾರಣ ಸ್ವತಂತ್ರ ಆಸ್ಪತ್ರೆಯ ಪಕ್ಕದಲ್ಲೇ ಇರುವ ತನ್ನ ಮನೆಗೆ ತೆರಳಿ ಘಟನೆಯ ಬಗ್ಗೆ ತನ್ನ ತಂದೆ-ತಾಯಿಗಳಿಗೆ ತಿಳಿಸದೇ. ತನ್ನ ಮನೆಯ ಮೇಲ್ಬಾಗದ ಕೊಠಡಿಯಲ್ಲಿ ಮಲಗುವುದಾಗಿ ತಿಳಿಸಿ, ಕೊಠಡಿಗೆ ತೆರಳಿ ರಾತ್ರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಿಗ್ಗೆ ತಮ್ಮ ಪುತ್ರ ಸ್ವತಂತ್ರ ಎದ್ದು ಹೊರಬರದಿದ್ದಾಗ ಅನುಮಾನಗೊಂಡ ಪೋಷಕರು ಕೊಠಡಿಯ ಕಿಟಕಿಯಲ್ಲಿ ನೋಡಿದಾಗ ತಮ್ಮ ಮಗನು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವುದು ಗೊತ್ತಾಗಿದೆ.. ಘಟನೆಯ ಬಗ್ಗೆ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಕೆ.ಬಿ.ಸ್ವತಂತ್ರ ಅವರ ನಿಧನಕ್ಕೆ ವಾರ್ಡಿನ ಪುರಸಭೆ ಸದಸ್ಯ ಗಿರೀಶ್, ಪುರಸಭೆ ಮಾಜಿಅಧ್ಯಕ್ಷ ನಾಗರಾಜು, ಮುಖ್ಯಾಧಿಕಾರಿ ಅಶೋಕ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತ ಸ್ವತಂತ್ರ ಅವರ ಬಂಧುಗಳು ಹಾಗೂ ತಂದೆತಾಯಿಗಳ ಆಕ್ರಂದನವು ಮುಗಿಲು ಮುಟ್ಟಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





