Breaking News

ಸರ್ಕಾರದ ಸಂಬಳ ಇದ್ರೂ ಲಂಚಕ್ಕೆ ಕೈ ಚಾಚಿದ ಎಎಸ್‌ಐ..! ಠಾಣೆಯಲ್ಲೇ ₹10 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ..

ಠಾಣೆಯಲ್ಲೇ ₹10 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ — ಎಂಥಾ ದುರಂತ ಸ್ಥಿತಿ..!

ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಠಾಣೆಯಲ್ಲೇ ಲಂಚ ಪಡೆಯುತ್ತಿದ್ದ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ (ಎಎಸ್‌ಐ) ಶಿವಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ…

ಮಾಹಿತಿಯ ಪ್ರಕಾರ, ಗಲಾಟೆ ಪ್ರಕರಣದಲ್ಲಿ ಹೆಸರು ಬಂದಿದ್ದ ರಾಜೇಗೌಡ ಎಂಬುವವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ‘ಸ್ಟೇಷನ್ ಬೇಲ್’ ಮೂಲಕ ಇತ್ಯರ್ಥಗೊಳಿಸುವುದಾಗಿ ಹೇಳಿ ಎಎಸ್‌ಐ ಶಿವಕುಮಾರ್ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆರೋಪಿಯೊಂದಿಗೆ ನಡೆದ ಮಾತುಕತೆಯನ್ನು ರಾಜೇಗೌಡ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು, ಸಾಕ್ಷ್ಯ ಸಮೇತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು…

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ, ಬುಧವಾರ ರಾತ್ರಿ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಎಎಸ್‌ಐ ಶಿವಕುಮಾರ್ ಅವರನ್ನು ರೆಡ್ ಹ್ಯಾಂಡಾಗಿ ಬಂಧಿಸಿದೆ..

ಲೋಕಾಯುಕ್ತ ಎಸ್ಪಿ ಎಸ್. ಸುರೇಶಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್ ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು..

ಕಾನೂನು ಕಾಪಾಡಬೇಕಾದ ಠಾಣೆಯಲ್ಲೇ ಲಂಚದ ಆರೋಪ ಕೇಳಿಬಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, “ಸರ್ಕಾರದ ಸಂಬಳ ಇದ್ದರೂ ಇನ್ನೂ ಲಂಚಕ್ಕೆ ಕೈ ಚಾಚೋದು ಎಷ್ಟು ಸರಿ?” ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ…

ಲೋಕಾಯುಕ್ತ ಅಧಿಕಾರಿಗಳೇ, ಹು–ಧಾ ಕಡೆಗೂ ಸ್ವಲ್ಪ ಗಮನ ಕೊಡಿ..! ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳೋದು ಯಾವಾಗ..?

Share News

About Shaikh BigTv

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *