Breaking News

ಮುರುಘಾಮಠಕ್ಕೆ ನಮಸ್ಕರಿಸಲೆಂದು ಬಂದ ಯುವಕರು ಹಣ‌ ಕದ್ದು ಪರಾರಿ

ಧಾರವಾಡ: ಮುರುಘಾಮಠಕ್ಕೆ ನಮಸ್ಕರಿಸಲೆಂದು ಬರುತ್ತಿದ್ದ ಇಬ್ಬರು ಬಾಲಕರು ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಕದ್ದು ಪರಾರಿಯಾಗುತ್ತಿದ್ದರು.ಈ ದೃಶ್ಯವನ್ನು ಇಂದು ಸಿಸಿಟಿವಿಯಲ್ಲಿ ಗಮನಿಸಿದ ಮಠದ ಸಿಬ್ಬಂದಿ ಹಾಗೂ ಸಾರ್ವಜನಿಕರು, ಆ ಬಾಲಕರನ್ನು ಹಿಡಿದು ಅವರ ಬಟ್ಟೆ ಬಿಚ್ಚಿಸಿ ಬುದ್ಧಿವಾದ ಹೇಳಿದ್ದಾರೆ.

ಪ್ರತಿದಿನ ನಮಸ್ಕಾರ ಮಾಡಲೆಂದು ಈ ಬಾಲಕರು ಬರುತ್ತಿದ್ದರು. ವಾಪಸ್ ಹೋಗುವಾಗ ಹುಂಡಿಯಲ್ಲಿ ಹಣ ಕದ್ದು ಪರಾರಿಯಾಗುತ್ತಿದ್ದರು. ಕಳೆದ ಎರಡು ವರ್ಷದಿಂದ ಇವರು ಆಗಾಗ ಮಠಕ್ಕೆ ಬಂದು ಕಳ್ಳತನ ಮಾಡುತ್ತಿದ್ದರು. ಹಾಗೂ ಮಠದ ಆವರಣದಲ್ಲಿ ಮಲಗಿದ್ದವರ ವ್ಯಾಲೆಟ್ ಕದಿಯುತ್ತಿದ್ದರು ಎಂಬುದನ್ನ ಬಾಲಕರು ಒಪ್ಪಿಕೊಂಡಿದ್ದಾರೆ. ಇಂದು ಆ ಇಬ್ಬರೂ ಅಪ್ರಾಪ್ತ ಬಾಲಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು ಆ ಬಾಲಕರ ಬಟ್ಟೆ ಬಿಚ್ಚಿಸುವುದರ ಜೊತೆಗೆ ಬುದ್ದಿವಾದ ಹೇಳಿದ್ದಾರೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *