Breaking News

ರೈತರ ವಿರೋಧದ ನಡುವೆಯೇ ಹಲಗಾ – ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ಆರಂಭ

ರೈತರ ವಿರೋಧದ ನಡುವೆ ಹಲಗಾ ಕಾಮಗಾರಿ ಆರಂಭಿಸಿರುವುದು

ಬೆಳಗಾವಿ: ರೈತರ ವಿರೋಧದ ನಡುವೆಯೂ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ(halaga Machhe Bypass Road work)ಯನ್ನು ಆರಂಭ ಮಾಡಲಾಗಿದೆ. ಫಲವತ್ತಾದ ಭೂಮಿಯಲ್ಲಿ ಬೆಳೆ ನಾಶಮಾಡಿ ಕಾಮಗಾರಿ ಆರಂಭಿಸುತ್ತಿದ್ದಂತೆ ರೈತರು ವಿರೋಧ ವ್ಯಕ್ತಪಡಿಸಿದರು.ಜೆಸಿಬಿ ಮುಂದೆ ನಿಂತು ಬೆಳೆ ಹಾನಿ ಮಾಡದಂತೆ ರೈತರು ಕೋರಿದರು. ಬೆಳೆ ನಾಶ ಮಾಡಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಖರ್ಚು ಮಾಡಿ ಬೆಳೆದ ಗಜ್ಜರಿ ನಾಶ ಪಡಿಸುತ್ತಿದ್ದೀರಾ ಎಂದು ರೈತರು ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು. ರೈತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಬೆಳೆ ಇದ್ದ ಜಮೀನು ಬಿಟ್ಟು ಬೇರೆ ಕಡೆ ಕಾಮಗಾರಿ ಆರಂಭಿಸಲಾಯಿತು.

ಡಿಸಿ ಭೇಟಿ, ಕಾಮಗಾರಿ ವೀಕ್ಷಣೆ:

ಬೆಳಗಾವಿ ತಾಲೂಕಿನ ಹಲಗಾ – ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಡಿಸಿ ಎಂ.ಜಿ. ಹಿರೇಮಠ ಭೇಟಿ ನೀಡಿದರು. ಗಜ್ಜರಿ ಬೆಳೆಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತ ರವಿ ಸೂರ್ಯವಂಶಿ ಮನವಿ ಮಾಡಿದರು.ತಮ್ಮ ಗದ್ದೆಯಲ್ಲಿ ಬಾವಿಯಿದ್ದು ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಕಾಮಗಾರಿ ನಡೆಸಲು ಸಹಕರಿಸಿ ಎಂದು ಡಿಸಿ ಮನವಿ ಮಾಡಿದರು. ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್, ಡಿಸಿಪಿ ವಿಕ್ರಂ ಆಮಟೆ ಸಾಥ್ ನೀಡಿದರು.

Share News

About admin

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *