Breaking News

ಬಿಟ್ ಕಾಯಿನ್ ಪ್ರಕರಣ ಬಯಲಿಗೆಳದಿದ್ದೇ ನಾವು- ಶಾಮೀಲಾದವ್ರು ಯಾರೇ ಆದರೂ ಬಿಡಲ್ಲಾ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಟ್ ಕಾಯಿನ್ (Bitcoin) ಪ್ರಕರಣ ಬಯಲಿಗೆ ತಂದು ಇದರ ತನಿಖೆ ಮಾಡಿದ್ದೇ ನಾವು. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ರೂ ಬಿಡಲ್ಲ, ಬಲಿ ಹಾಕ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ) ಖಡಕ್​ ಆಗಿ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ವಿಧಾನಸೌಧದ ಮುಂದೆ ನೆಹರು ಪುತ್ಥಳಿಗೆ ಗೌರವ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣ ಬಯಲಿಗೆ ತಂದಿದ್ದೇ ನಾವು. ತನಿಖೆಯನ್ನು ಇಡಿ, ಸಿಬಿಐಗೆ ವಹಿಸಿದ್ದೇವೆ. ಅಧಿಕಾರಿಗಳು ಈ ಕುರಿತು ಹಲವು ಮಾಹಿತಿ ಕೇಳಿದ್ದರು. ಅದನ್ನು ಅವರಿಗೆ ಕೊಟ್ಟಿದ್ದೇವೆ. ನಾವೇ ಬಿಟ್ ಕಾಯಿನ್ ಪ್ರಕರಣವನ್ನು ಬಯಲಿಗೆಳೆದಿದ್ದು ಎಂದು ಕಾಂಗ್ರೆಸ್ ಆರೋಪಕ್ಕೆ ಸಿಎಂ ಉತ್ತರ ನೀಡಿದರು.

2018 ರಲ್ಲಿ ಕಾಂಗ್ರೆಸ್, ಶ್ರೀಕಿಯನ್ನು ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗ ಆಗುತ್ತಿತ್ತು. ನಾವು ಹಗರಣದ ಬಗ್ಗೆ ಬಹಳ ಮುಕ್ತವಾಗಿದ್ದೇವೆ. ಇದನ್ನು ಬಯಲು ಮಾಡಿದವರೇ ನಾವು. ಈ ಪ್ರಕರಣದಲ್ಲಿ ಯಾರಿಗಾದರು ಮೋಸ ಆಗಿದ್ರೆ ಕ್ರಮ ಜರುಗಿಸ್ತೇವೆ. ಒಂದು ಟ್ವಿಟರ್ ಆಧಾರದ ಮೇಲೆ ಐದು ಸಾವಿರ ಬಿಟ್ ಕಾಯಿನ್ ವರ್ಗಾಯಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ. ಒಂದು ಟ್ವಿಟರ್ ಇಟ್ಟುಕೊಂಡು ಕಾಂಗ್ರೆಸ್​ನವರು ಆರೋಪ ಮಾಡ್ತಾರೆ ಅಂದ್ರೆ, ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ. ಆ ಟ್ವಿಟರ್​ಗೆ ದಾಖಲೆ, ಸಾಕ್ಷಿ ಇಟ್ಟು ಮಾತನಾಡಿ. ಟ್ವಿಟರ್ ಮೇಲೆ ಆರೋಪ ಮಾಡುವುದು ರಾಷ್ಟ್ರೀಯ ಪಕ್ಷದ ವಕ್ತಾರರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾಗೆ ಸಿಎಂ ತಿರುಗೇಟು ನೀಡಿದ್ರು.

Share News

About admin

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *