Breaking News

ಮತಾಂತರ ಕಾಯ್ದೆ ನಿಷೇಧ ಹಾಗೂ ಚರ್ಚ್ ಮೇಲಿನ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ

ಮತಾಂತರ ಕಾಯ್ದೆ ನಿಷೇಧ ಹಾಗೂ ಚರ್ಚ್ ಮೇಲಿನ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನೆಡೆಸಿದರು

ಹುಬ್ಬಳ್ಳಿ – ಮತಾಂತರ ನಿಷೇಧ ಕಾಯ್ದೆ ಹಾಗೂ ಚರ್ಚ್ ಮೇಲಿನ ದಬ್ಬಾಳಿಕೆ ಖಂಡಿಸಿ ಇಂದು ಜೈ ಭೀಮ್ ಸಂಘಟನೆ ವತಿಯಿಂದ ತಹಶಿಲ್ದಾರ ಕಛೇರಿ ಎದುರು ಪ್ರತಿಭಟನೆ ನೆಡೆಸಿದರು.

ರಾಷ್ಟಕ್ಕೆ ಸಂವಿಧಾನವೇ ಬದುಕಿನ ಧರ್ಮ ಇಲ್ಲಿ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ಯಗಳನ್ನು ಕೇವಲ ಹಕ್ಕಾಗಿ ಅಲ್ಲಾ ಭಾದ್ಯತೆಯ ಕರ್ತವ್ಯಕ್ಕಾಗಿ ನೀಡಲಾಗಿದೆ.ಹಕ್ಕು ಮತ್ತು ಕರ್ತವ್ಯಗಳು ಒಂದೆ ನಾಣ್ಯದ ಎರಡು ಮುಖಗಳು. ಮತಾಂತರ ನಿಷೇಧ ಕಾಯ್ದೆ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬರೆ ಎಳೆಯುವವರು.ಈ ಕಾಯ್ದೆಯನ್ನು ಜಾರಿಗೆ ತರುವ ಮುನ್ನ ಈ ದೇಶದ ಚಾರಿತ್ರಿಕ ಸತ್ಯವನ್ನು ಅರಿಯಬೇಕಿತ್ತು.ಪುರಾತನ ಕಾಲ ಮತ್ತು ನಾಗರೀಕತೆಯಲ್ಲಿ ಪ್ರಗತಿಯಾಗಿದ್ದರು.ಪ್ರಾಚೀನ ನಿಯಮಗಳು ಹಿಂದೂ ಧರ್ಮದಲ್ಲಿ ದಲಿತರನ್ನು.ತಳ ಸಮುದಾಯಗಳನ್ನು ಅಲ್ಪಸಂಖ್ಯಾತರನ್ನು ನೆಡೆಸಿಕೊಳ್ಳುವ ರೀತಿ ಈಗಲೂ ತೀರಾ ಅಮಾನವೀಯ.ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ ಹಳ್ಳಿಗಳಲ್ಲಿ‌ ಈಗಲೂ ಕೆರೆ,ಬಾವಿಗಳ ನೀರನ್ನು ಮುಟ್ಟಲು ಬಿಡುವುದಿಲ್ಲ ಅಂದರೆ ನೀವೆ ಅರ್ಥಮಾಡಿಕೊಳ್ಳಿ ಎಂತಹ ಕೆಟ್ಟ ಪರಿಸ್ಥಿತಿಗೆ ಬಂದು ನಿಂತಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.ಮತ್ತು ಮತಾಂತರ ನಿಷೇಧ ಕಾಯ್ದೆ ಹಾಗೂ ಚರ್ಚ್ ಮೇಲಿನ ದಬ್ಬಾಳಿಕೆ ಖಂಡಿಸಿ ಪ್ರತಿಭಟನೆ ನೆಡೆಸಿ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಅದ್ಯಕ್ಷರಾದ ಶಂಕರ ಅಜಮನಿ,ಅಬ್ದುಲ್ ಇಸಾಮದಿ,ಎಸ್,ವಿ ಪಾಟೀಲ್, ಮಂಜುನಾಥ ದೊಡ್ಡಮನಿ,ಸೋಮು ಹಂಜಗಿ‌ ಇತರರು ಉಪಸ್ಥಿತರಿದ್ದರು.

Share News

About BigTv News

Check Also

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅಟ್ಟಹಾಸ: ಬೆನ್ನಟ್ಟಿ ಬೈಕ್ ಗೆ ಒದ್ದ ಏಜೆಂಟ್: ಕೆಳಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು

ನೆಲಮಂಗಲದಲ್ಲಿ ಬೈಕ್ ಸಾಲದ ಕಂತು ಪಾವತಿಸದ ಕಾರಣ ಮೈಕ್ರೋ ಫೈನಾನ್ಸ್ ಏಜೆಂಟರು ಬೈಕ್‌ಗೆ ಒದ್ದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದ …

Leave a Reply

Your email address will not be published. Required fields are marked *