Breaking News

ಸಾಮೂಹಿಕ ವಿವಾಹದಲ್ಲಿ ಎಲ್ಲರ ಗಮನ ಸೆಳೆದ ಕುಬ್ಜ ಜೋಡಿ

ಬಾಗಲಕೋಟೆ: ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆದ ಘಟನೆ ಬಾದಾಮಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಹೇಶ್ ಹೊಸಗೌಡ್ರ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಕುಬ್ಜ ಯುವಕ-ಯುವತಿ ಹಸೆಮಣೆ ಏರಿದ್ದು, ವಿಶೇಷವಾಗಿತ್ತು.

ಮೂಲತಃ ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ನಿವಾಸಿ ರವಿ ನಾಯ್ಕರ್ (35) ಬೀಳಗಿ ಪಟ್ಟಣದ ಸುಜಾತ ತಳವಾರ (21) ಎಂಬ ಯುವತಿಯನ್ನು ವರಿಸಿದನು.ರವಿ ನಾಯ್ಕರ್​​ ಹುಬ್ಬಳ್ಳಿಯಲ್ಲಿ ಪಾನ್​ ಶಾಪ್​ ಹಾಕಿಕೊಂಡಿದ್ದಾನೆ. ಮದುವೆ ವಯಸ್ಸಾದರೂ, ತಕ್ಕ ಯುವತಿ ದೊರೆಯದ ಕಾರಣ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಬ್ಬರು ಮದುವೆ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Share News

About admin

Check Also

sp ನಂದಗಾವಿ” ಸಿಡಿಲು ದಾಳಿ: ಲಂಚದ ಲೈನಲ್ಲಿ ಸಿಕ್ಕಿಬಿದ್ದ ಪೊಲೀಸರಿಗೆ ಜೈಲು!

ಲಂಚದ ಆಟಕ್ಕೆ ಫುಲ್ ಸ್ಟಾಪ್: ಕೆರೂರು ಠಾಣೆಯ PSI-ಕಾನ್ಸ್‌ಟೇಬಲ್ ಜೈಲು ಪಾಲು! ಭ್ರಷ್ಟ ಪೊಲೀಸರಿಗೇ ಶಾಕ್: ಲೋಕಾಯುಕ್ತ ದಾಳಿಗೆ ಕುಸಿದ …

Leave a Reply

Your email address will not be published. Required fields are marked *