ಬೀದರ್ :2021 ನೇ ಸಾಲಿನಲ್ಲಿ ಧಾಖಲಾಗಿದ್ದ ಕಳ್ಳತನ, ಸುಲಿಗೆ, ದರೋಡೆ ಪ್ರಕರಣಗಳನ್ನ ಬೇಧಿಸಿರುವ ಬೀದರ್ ಜಿಲ್ಲಾ ಪೊಲೀಸರು 1201.5 ಗ್ರಾಂ ಚಿನ್ನಾಭರಣ, 728.3 ಗ್ರಾಂ ಬೆಳ್ಳಿಯ ಆಭರಣ, 57,14,416 ನಗದು ಹಣವನ್ನ ರಿಕವರಿ ಮಾಡಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರಕರಣಗಳನ್ನ ಸಹ ಬೇದಿಸುವಲ್ಲಿ ಯಶಸ್ಸಾಗಿರುವ ಪೊಲೀಸರು, 4 ಗುಡ್ಸ್ ಲಾರಿ, 1 ಟೆಂಪೂ, 1 ಕಾರು, 84 ಬೈಕ್, ಸೇರಿ ಹಲವು ವಸ್ತುಗಳನ್ನ ಮರು ವಶಕ್ಕೆ ಪಡೆದ್ದಾರೆ. ಬೀದರ್ ಜಿಲ್ಲಾ ಪೊಲೀಸ್ ವರೀಷ್ಠಾಧೀಕಾರಿ ನಾಗೇಶ್ ಡಿ.ಎಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ದೊಡ್ಡ ಸಫಲತೆ ಕೈಸೇರಿದ್ದು, ಜಿಲ್ಲೆಯ ಜನರ ಮೆಚ್ಚುಗೆಗೂ ಪಾತ್ರವಾಗಿದೆ.

ಇನ್ನು ಬೀದರ್ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈಧಾನದಲ್ಲಿ ಕಳ್ಳರಿಂದ ವಶ ಪಡಿಸಿಕೊಂಡಿದ್ದ ವಸ್ತುಗಳೆಲ್ಲವನ್ನ ಮರಳಿ ಮಾಲೀಕರಿಗೆ ನೀಡುವ ಕಾರ್ಯವನ್ನ ಸಹ ಮಾಡಿದ್ದು, ಸಧ್ಯ ಚಿನ್ನಾಭರಣ ಕಳೆದುಕೊಂಡು ಕಂಗಾಲಾಗಿದ್ದವರ ಮೊಗದಲ್ಲಿ ಮತ್ತೆ ನಗು ಮೂಡುವಂತಾಗಿದೆ. ಅಲ್ಲದೇ ಪೊಲೀಸರ್ ಕಾರ್ಯಶೈಲಿಗೆ ಸಧ್ಯ ಜಿಲ್ಲೆಯಾಧ್ಯಂತ ಮೆಚ್ಚುಗೆಯೂ ಕೂಡ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

