ಚಿತ್ತಾಪುರ: ಕೈಗಡವಾಗಿ ನೀಡಿದ್ದ ₹2 ಲಕ್ಷ ಹಣವನ್ನು ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಘಟನೆ ಭಾಗೋಡಿ ಗ್ರಾಮದಲ್ಲಿ ನಡೆದಿದೆ. ಸೂರ್ಯಕಾಂತ ಜಮಾದಾರ ಅವರು ಆ.26ರಂದು ಹಣ ವಾಪಸ್ ಕೇಳಲು ತೆರಳುತ್ತಿದ್ದಾಗ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಹುಣಚಪ್ಪ ಮರತೂರ ಎದುರಾಗಿದ್ದಾರೆ. ಈ ವೇಳೆ ಹಣದ ವಿಚಾರಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಹುಣಚಪ್ಪ ಮಲ್ಲಪ್ಪ ಮರತೂರ ಹಾಗೂ ರಾಜು ಮಲ್ಲಪ್ಪ ಮರತೂರ ವಿರುದ್ಧ ಸೆ.10ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
