ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ ಹಾಗೂ ಕ್ರಷರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಲ್ಯಾ ಗ್ರಾಮದ ಕುಂಟಾಡಿಯಲ್ಲಿ ಸ್ಪೋಟಕ ಬಳಸಿ ಕಲ್ಲು ಪುಡಿಮಾಡಿ ಸಾಗಿಸುತ್ತಿದ್ದ ಆರೋಪದಡಿ ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಸಿಎಂಎಸ್ ಕ್ರಷರ್‌ನಿಂದ ಮೊಹಮ್ಮದ್ ಶಫಿ ಹಾಗೂ ರಂಜಿತ್ ಅವರನ್ನು ಬಂಧಿಸಲಾಗಿದೆ. ಪಡುಬಿದ್ರಿಯ ಸಾಂತೂರು ಬಳಿಯ ಕ್ರಷರ್ ಮೇಲೂ ದಾಳಿ ನಡೆಸಿ 40 ಯುನಿಟ್ ಜೆಲ್ಲಿ, ಎರಡು ಲಾರಿ ಹಾಗೂ ಒಂದು ಜೆಸಿಬಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

