ಬೆಂಗಳೂರು: ರಸ್ತೆಬದಿ ಚಹಾ ಕಪ್ ಎಸೆಯದಂತೆ ಸಲಹೆ ನೀಡಿದ ಪೌರಕಾರ್ಮಿಕನ ಮೇಲೆ ಕೇರಳ ಮೂಲದ ಮಹಿಳೆ ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ವೈದೇಹಿ ಹಾಗೂ ಆಕೆಯ ಸ್ನೇಹಿತನನ್ನು ವೈಟ್‌ಫೀಲ್ಡ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಟ್ಟಂದೂರು ಅಗ್ರಹಾರದ ಕುವೆಂಪು ರಸ್ತೆಯಲ್ಲಿ ಚಹಾ ಕುಡಿದ ಬಳಿಕ ವೈದೇಹಿ ಕಪ್ ಅನ್ನು ರಸ್ತೆಬದಿ ಎಸೆದಿದ್ದಳು. ಇದನ್ನು ಗಮನಿಸಿದ ಪೌರಕಾರ್ಮಿಕ ಕಪ್ ಅನ್ನು ಕಸದ ಡಬ್ಬಿಗೆ ಹಾಕುವಂತೆ ಸೂಚಿಸಿದ್ದರಿಂದ ಮಹಿಳೆ ಆಕ್ರೋಶಗೊಂಡು ನಿಂದಿಸಿ, ಕಲ್ಲಿನಿಂದ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಕುರಿತು ವೈಟ್‌ಫೀಲ್ಡ್ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

