Breaking News

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 ಲಕ್ಷ ಎಂದು ಅಂದಾಜಿಸಲಾಗಿದೆ. ಆಗಸ್ಟ್ 16ರಂದು ಗೃಹಪ್ರವೇಶ ನಡೆದಿದ್ದು, ಎರಡು ದಿನಗಳ ಬಳಿಕ ಕಳ್ಳತನ ಬೆಳಕಿಗೆ ಬಂದಿದೆ. ಮನೆಗೆ ಬಂದಿದ್ದ ಅಲಂಕಾರಿಕರು ಹಾಗೂ ಕೆಲಸದವರ ಮೇಲೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಬಲವಂತವಾಗಿ ಮನೆಗೆ ನುಗ್ಗಿದ ಕುರುಹುಗಳಿಲ್ಲ. ದೂರು ನೀಡಲು ವರ್ತೂರು ಪೊಲೀಸರು ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಟೆಕ್ಕಿ ಆರೋಪಿಸಿದ್ದಾರೆ. ಬಳಿಕ ಟೆಕ್ಕಿ ಪೊಲೀಸ್ ಕಮಿಷನರ್‌ಗೆ ನೇರವಾಗಿ ಕರೆ ಮಾಡಿ ದೂರು ನೀಡಿದ್ದು, ಅವರ ಸೂಚನೆಯ ಮೇರೆಗೆ ಸೆ.8ರಂದು ವರ್ತೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಶಂಕಿತರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತನಿಖೆ ಮುಂದುವರಿಸಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *