ಧಾರವಾಡ : ಜಿಲ್ಲೆಯಾದ್ಯಂತ ಸತತ ಐದನೇ ದಿನವೂ ಮುಂದುವರೆದಿದ್ದು ಮಳೆಯ ಅಬ್ಬರದಿಂದ ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಅಮ್ಮಿನಭಾವಿ ಭಾಗದ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಹಿಂಗಾರು ಬಿತ್ತನೆ ಮಾಡಿ ಉತ್ತಮವಾದ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸತತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ರೈತರು ಹಿಂಗಾರು ಬಿತ್ತನೆ ಮಾಡಿದ ಕಡಲೆ, ಗೋಧಿ, ಕುಸುಬಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತು ಕೋಳೆಯುಂತಾಗಿದೆ. ಧಾರವಾಡ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿ ಕಂಡುಬಂದಿದ್ದು ಸಂಪೂರ್ಣ ವಾಗಿ ರೈತರ ಬೆಳೆಗಳು ಜಲಾವೃತವಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

