ಬೆಳಗಾವಿ: ಬಿಜೆಪಿ ಮೆರವಣಿಗೆ ತಡೆಯಲು ಯತ್ನಿಸಿದ ಮಾರ್ಕೆಟ್ ಎಸಿಪಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತರಾಟೆ ತೆಗೆದುಕೊಂಡ ಘಟನೆ ನಗರದ ಡಿಸಿ ಕಚೇರಿ ಎದುರು ನಡೆಯಿತು.
ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಇಲ್ಲಿನ ಸಾಹಿತ್ಯ ಭವನದಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಮಾರ್ಗಮಧ್ಯದಲ್ಲಿ ಮೆರವಣಿಗೆ ತಡೆಯಲು ಬಂದ ಎಸಿಪಿಗೆ ರಮೇಶ್ ಜಾರಕಿಹೊಳಿ ತರಾಟೆ ತೆಗೆದುಕೊಂಡರು.ಜನಪ್ರತಿನಿಧಿಗಳಿದ್ದಾರೆ ಡಿಸಿ ಕಚೇರಿಯವರೆಗೆ ಬರಲಿ ಬಿಡಿ ಎಂದು ರಮೇಶ್ ಹೇಳಿದರು. ಡಿಸಿ ಆದೇಶವಿದೆ ಎಂದರೂ ಕೇಳದೆ ಪೊಲೀಸ್ ಬ್ಯಾರಿಕೇಡ್ ಸರಿಸಿ ಒಳ ಬಂದರು. ಈ ವೇಳೆ ಸಚಿವ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ನಾಯಕರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

