ಚಿಕ್ಕೋಡಿ: ಮಹರಾಷ್ಟ್ರದಲ್ಲಿ ನಿರಂತರ ರಕ್ಕಸ ಮಳೆ ನಿರಂತರ ಮಳೆಯಿಂದ ಕರ್ನಾಟಕದ ಧೂದಗಂಗಾ, ವೇದಗಂಗಾ,ಕೃಷ್ಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ನದಿ ನೀರಿಗೆ ಇಳಿಯದಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ.ಆದರೆ ಇದನ್ನು ಲೆಕ್ಕಿಸದ ಜನ ಹರಿಯುವ ನದಿಯಲ್ಲಿ ಜೀವ ಕೈಲಿ ಹಿಡಿದು ದಾಟುವ ಗೋಜಿಗೆ ಹೋಗುತಿದ್ದು , ಚಿಕ್ಕೋಡಿ ತಾಲೂಕಿನ ಕಾರದಗಾ ಭೋಜ ಗ್ರಾಮಗಳ ಮಧ್ಯೆ ಹರಿದಿರು ಧೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ವ್ಯಕ್ತಿಗಳಿಬ್ಬರು ನದಿ ದಾಟಿ ಹೋಗುವ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.. ಸರ್ಕಾರ ಮತ್ತು ಅಧಿಕಾರಿಗಳು ಜನರಿಗಾಗಿ ಎಷ್ಟೆ ಸೂಚೆನೆ ನೀಡಿದ್ರೂ ಸಹ ಜನ ಅದನ್ನ ತಲೆಕೆಡಿಸಿಕೊಳ್ಳದೆ ಜೀವದ ಹಂಗು ತೊರೆದು ನದಿ ದಾಟುತ್ತಿದ್ದಾರೆ.. ಹೀಗಾಗಿ ನದಿಯ ಅಕ್ಕ ಪಕ್ಕ ಪೊಲೀಸರ ನಿಯೋಜನೆ ಮಾಡಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ..
bigtvnews | Hubli Dharwad News | Kannada News | Karnataka News Hubli News | News In Hubli | Local news





