Breaking News

ದತ್ತಾತ್ರೇಯ ಮೂರ್ತಿಯನ್ನು ಭಗ್ನ: ದೇವಸ್ಥಾನಕ್ಕೆ ಭೇಟಿದ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಅಪರ್ಣಾ ಅಪಾರ್ಟೆಂಟ್ ನಲ್ಲಿನ ದತ್ತಾತ್ರೇಯ ದೇವಸ್ಥಾನದಲ್ಲಿ ದತ್ತಾತ್ರೇಯ ಮೂರ್ತಿಯನ್ನು ಭಗ್ನ ಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಂತ್ರಿ ಪ್ರಹ್ಲಾದ್‌ ಜೋಷಿ ಅಪರ್ಣಾ ಅಪಾರ್ಟ್‌ಮೆಂಟ್‌ನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಾರದ ಕೆಳಗೆ ದತ್ತಾತ್ರೇಯ ದೇವಸ್ಥಾನದಲ್ಲಿ ಇಡಲಾಗಿದ್ದ ದತ್ತಾತ್ರೇಯ ಮೂರ್ತಿಯ ನಾಲ್ಕು ಕೈಗಳನ್ನು ಮೂರಿದು ವಿರೂಪಗೊಳಿಸಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿತ್ತು. ಆದ್ರೆ ತಾಂತ್ರಿಕ ಸಾಕ್ಷಿಗಳು ಸಿಗದ ಕಾರಣ ಪೊಲೀಸರ ತನಿಖೆಗೆ ಸ್ವಲ್ಪ ಹಿನ್ನೆಡೆಯಾಗಿದೆ. ಆದ್ರೂ ಕೂಡಾ ಪೊಲೀಸರು ಬೇರೆ ಬೇರೆ ವಿಧಾನಗಳಿಂದ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಈ ಘಟನೆ ನಡೆದಾಗ ನಾನು ಬೇರೆ ದೇಶದಲ್ಲಿದ್ದೆ. ಹೀಗಾಗಿ ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದೇನೆ. ಘಟನೆಯ ಕುರಿತು ಕಮಿಷನ‌ರ್ ಶಶಿಕುಮಾ‌ರ್ ಜೊತೆ ಮಾತುಕತೆನಡೆಸಿದ್ದು ಸಿಸಿ ಕ್ಯಾಮರಾ ಬಂದ್‌ ಇದ್ದ ಕಾರಣ ಆರೋಪಿಗಳ ಪತ್ತೆ ಸ್ವಲ್ಪ ಕಷ್ಟವಾಗಿದೆ. ಆದ್ರೂ ಕೂಡಾ ಆರೋಪಿಗಳನ್ನು ಆದಷ್ಟು ಬೇಗ ಬಂಧನ ಮಾಡುವಂತೆ ಹೇಳಿದ್ದೇನೆ ಎಂದರು.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *