Breaking News

ಪೆನ್ಸಿಲ್​​ ಕದ್ದ ವಿಚಾರಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಟಾಣಿಗಳು: ಮಕ್ಕಳ ಮಾತು ಕೇಳಿದ್ರೆ ನೀವೂ ನಗ್ತೀರಾ!

ಕರ್ನೂಲ್​(ಆಂಧ್ರಪ್ರದೇಶ): ಪೊಲೀಸರೆಂದರೆ ಭಯ ಸಾಮಾನ್ಯ. ಅವರಿಂದ ಆದಷ್ಟು ದೂರ ಇರುವುದಕ್ಕೆ ಜನರು ಇಷ್ಟಪಡುತ್ತಾರೆ. ಏನಾದ್ರು ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ನಡೆದರೂ ಕೂಡ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರದೆ ಸುಮ್ಮನಾಗಿ ಬಿಡುತ್ತಾರೆ.

ಆದರೆ, ಕೆಲವೊಬ್ಬರು ವಿಚಿತ್ರ ಕಾರಣಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿ ದೂರು ನೀಡಿರುವ ಉದಾಹರಣೆಗಳಿವೆ. ಆಂಧ್ರದ ಕರ್ನೂಲ್‌ನಲ್ಲಿ ಇದೇ ರೀತಿಯ ಕುತೂಹಲಕಾರಿ ಘಟನೆ ನಡೆದಿದೆ.

ಇಲ್ಲಿ ಪೆನ್ಸಿಲ್​ ಕದ್ದಿದ್ದಕ್ಕಾಗಿ 3ನೇ ತರಗತಿ ಬಾಲಕನೋರ್ವ ಶಿಕ್ಷಕರಿಗೆ ಹೇಳದೆ, ತನ್ನ ಸ್ನೇಹಿತನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಠಾಣೆಯಲ್ಲಿ ಇಬ್ಬರು ಮಕ್ಕಳ ನಡುವಿನ ಸಂಭಾಷಣೆ ಪೊಲೀಸರಿಗೆ ಒಳ್ಳೆಯ ಮನರಂಜನೆ ಕೊಟ್ಟಿದೆ. ಇದರ ವಿಡಿಯೋ ತುಣುಕನ್ನು ಆಂಧ್ರಪ್ರದೇಶ ಪೊಲೀಸರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೊಲೀಸರ ಬಳಿ ಬಂದ ಬಾಲಕರು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಈ ವೇಳೆ ಒಬ್ಬ, ಪ್ರತಿ ದಿನ ತಾನು ತೆಗೆದುಕೊಂಡು ಬರುವ ಪೆನ್ಸಿಲ್ ಅನ್ನು ಗೆಳೆಯ ಕಳ್ಳತನ ಮಾಡುತ್ತಿದ್ದಾನೆಂದು ದೂರಿದ್ದಾನೆ. ಇದಕ್ಕೆ ಆರೋಪಿ ಸ್ಥಾನದಲ್ಲಿರುವ ಬಾಲಕ, ತಾನು ಪೆನ್ಸಿಲ್‌ ಕದ್ದಿಲ್ಲ ಎಂದು ಹೇಳಿದ.

Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *