ಹುಬ್ಬಳ್ಳಿ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಹಲವಾರು ಸಾವು ನೋವುಗಳು ಸಂಭವಿಸಿರುವುದು ವಿಷಾದಕರ ಸಂಗತಿಯಾಗಿದೆ. ಕಳಪೆ ಕಟ್ಟಡ ನಿರ್ಮಾಣದಲ್ಲಿ ಕೈ ಜೋಡಿಸಿರುವ ಇಂಜಿನಿಯರ್, ಗುತ್ತಿಗೆದಾರ ಹಾಗೂ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿ ಮಾಡಬೇಕು ಅಲ್ಲದೇ ಮೃತರ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಪರಿಹಾರದ ಮೊತ್ತವನ್ನು ನೀಡಬೇಕು ಎಂದು ವೀರಶೈವ ಸಂಘಟನಾ ಸಮಿತಿಯ ಸದಸ್ಯ ಚನ್ನಯ್ಯ ಚೌಕಿಮಠ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಬಹುಮಹಡಿ ಕಟ್ಟಡ ಕುಸಿದು ಅಮಾಯಕ ಕಟ್ಟಡ ಕಾರ್ಮಿಕರು ಹಾಗೂ ಅದರಲ್ಲಿ ವಾಣಿಜ್ಯ ಮಳಿಗೆಯನ್ನು ಹೊಂದಿರುವ ಸಾರ್ವಜನಿಕರು ಇದರಲ್ಲಿ ಅಪಾರ ಜೀವಹಾನಿಯಾಗಿದ್ದು, ಅವಶೇಷ ಅಡಿಯಲ್ಲಿ ಸಿಲುಕಿ ಸಾವು ನೋವು ಅನುಭವಿಸಿದವರಿಗೆ ಸರ್ಕಾರ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದರು.ಕಳಪೆ ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸಿದ ಅಧಿಕಾರಿಗಳಿಗೆ, ಇಂಜಿನಿಯರ್ ಹಾಗೂ ಮಾಲೀಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು. ಅಲ್ಲದೇ ವೀರಶೈವ ಸಂಘಟನಾ ಸಮಿತಿಯಿಂದ ಮೃತರ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಧನಸಹಾಯವನ್ನು ಕೂಡ ನೀಡಲಾಗುತ್ತದೆ ಎಂದು ಅವರು ಪತ್ರಿಕಾಗೋಷ್ಠಿ ತಿಳಿಸಿದರು.ಮಂಹಾತೇಶ ಗಿರಿಮಠ, ಮಲ್ಲಿಕಾರ್ಜುನ ಶಿರಗುಪ್ಪಿ, ಜಗದೀಶ ಧಾರವಾಡ ಸೇರಿದಂತೆ ಇತರರು ಇದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





