Breaking News

ಲಕನೋ :ಚಲಿಸುತ್ತಿದ್ದ ರೈಲಿನಡಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು!!

ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದ 28 ವರ್ಷದ ಯುವಕ ಸಾವನ್ನಪ್ಪಿದ್ದು ಆತನ ಪ್ರೇಯಸಿ 24 ವರ್ಷದ ಯುವತಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ.ಸ್ಥಳೀಯ ಪೊಲೀಸ್ ಠಾಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿ, “ಸೊನ್ಹಾರ್ ಮಹುವಾ ಪಟ್ಟಿಯ ನಿವಾಸಿಗಳಾದ ರೋಹಿತ್ ಕುಮಾರ್ ಯಾದವ್ (28) ಮತ್ತು ಕಾಜಲ್ ಗೌತಮ್ (24) ಎಂಬುವವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಭದೋಹಿ-ವಾರಾಣಸಿ ಗಡಿಯ ಕಾಂಢಿಯಾ ರೈಲ್ವೆ ಕ್ರಾಸಿಂಗ್ ಬಳಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದಿದ್ದಾರೆʼʼ ಎಂದು ಹೇಳಿದ್ದಾರೆ.ಪೊಲೀಸರ ಪ್ರಕಾರ ವಿವಾಹಿತನಾಗಿದ್ದ ಯಾದವ್‌ಗೆ ಇಬ್ಬರು ಮಕ್ಕಳಿದ್ದರೂ ಕಾಜಲ್ ಗೌತಮ್‌ ಜತೆ ಕಳೆದ ಒಂದು ವರ್ಷದಿಂದ ಪ್ರೇಮ ಸಂಬಂಧದಲ್ಲಿದ್ದ. ಇಬ್ಬರೂ ತಮ್ಮ ಕುಟುಂಬಗಳ ವಿರೋಧದ ನಡುವೆಯೂ ಮದುವೆಯಾಗಲು ಇಚ್ಛಿಸಿದ್ದರು ಎಂದು ವರದಿಯಾಗಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *