Breaking News

32 ವಾಹನಗಳು, 4 ಟಾರ್ಗೆಟ್: ಬೆಚ್ಚಿ ಬೀಳಿಸುವಂತಿದೆ ಟೆರರ್ ಗ್ಯಾಂಗ್ ನ ಸ್ಟೋರಿ

ದೆಹಲಿ ಸ್ಪೋಟದ ರೂವಾರಿಗಳ ಸಂಚು ಒಂದೊಂದಾಗಿ ಬಯಲಾಗುತ್ತಿದೆ. ಈ ಗ್ಯಾಂಗ್ 32 ವಾಹನಗಳನ್ನು ಬಳಸಿ 4 ಪ್ರಮುಖ ಸ್ಥಳಗಳನ್ನು ಗುರಿಯಾಗಿರಿಸಿ ದಾಳಿ ಮಾಡುವ ಹುನ್ನಾರ ನಡೆಸಿದ್ದರು ಎಂಬ ಬೆಚ್ಚಿ ಬೀಳಿಸುವ ಅಂಶ ಹೊರಬೀಳುತ್ತಿದೆ.ಇದಕ್ಕಾಗಿ 32 ಹಳೆಯ ವಾಹನಗಳನ್ನು ಖರೀದಿಸಿದ್ದ ಉಗ್ರರು ದೇಶದ ಪ್ರಮುಖ ನಾಲ್ಕು ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದರು.ಈ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸುವ ಯೋಜನೆ ಉಗ್ರರದ್ದಾಗಿತ್ತು. ಇದಕ್ಕೆ ಉಗ್ರರಿಂದ ವಶಪಡಿಸಿಕೊಳ್ಳಲಾದ ಭಾರೀ ಪ್ರಮಾಣದ ಸ್ಪೋಟಕವೇ ಸಾಕ್ಷಿ. ಈ ಉಗ್ರ ಕೃತ್ಯಕ್ಕಾಗಿ ಭಯೋತ್ಪಾದಕರ ಗ್ಯಾಂಗ್ 20 ಲಕ್ಷ ರೂ. ಹಣ ಒಟ್ಟುಗೂಡಿಸಿತ್ತು. ಕಾರ್ಯಾಚರಣೆಯ ನೇತೃತ್ವ ಉಮರ್ ನದ್ದಾಗಿತ್ತು. ಆತನಿಗೆ ಹಣ ಸಂದಾಯ ಮಾಡಲಾಗಿತ್ತು. ಹೀಗಾಗಿ ಈಗ ಇವರಿಗೆ ಹಣಕಾಸಿನ ನೆರವು ನೀಡುತ್ತಿದ್ದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದೀಗ ಉಗ್ರ ಕೃತ್ಯಕ್ಕಾಗಿ ಖರೀದಿಸಲಾಗಿದ್ದು ಮತ್ತೊಂದು ಇಕೊ ಸ್ಪೋರ್ಟ್ಸ್ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಇವರಿಗೆ ಇನ್ನಷ್ಟು ಜನ ನೆರವಾಗಿರುವುದು ಖಚಿತವಾಗಿದೆ. ಹೀಗಾಗಿ ಇವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *