ಧಾರವಾಡ : ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಹೆತ್ತ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ .
ಪುಂಡಲೀಕ ಒಂಟಿಗಡ ಎಂಬಾತನೇ ಮಗನಿಂದ ಹತ್ಯೆಗೀಡಾದವನು.ಪುಂಡಲೀಕ ಪ್ರತಿನಿತ್ಯ ಮದ್ಯ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ . ಬುಧವಾರ ಇದೇ ರೀತಿ ಪುಂಡಲೀಕ ಜಗಳವಾಡಿದ್ದಾನೆ . ಈ ಜಗಳ ವಿಕೋಪಕ್ಕೆ ತಿರುಗಿ ಸ್ವತಃ ಪುಂಡಲೀಕನ ಮಗನೇ ಕೊಡಲಿಯಿಂದ ಹತ್ಯೆ ಮಾಡಿದ್ದಾನೆ . ಹತ್ಯೆ ಮಾಡಿದ ಮಗ ಅಪ್ರಾಪ್ತನಾಗಿದ್ದಾನೆ . ಘಟನಾ ಸ್ಥಳಕ್ಕೆ ಗರಗ ಠಾಣೆ ಪಿಎಸ್‌ಐ ಕಿರಣ ಮೋಹಿತೆ , ಸಿಪಿಐ ಪಾಟೀಲ ಹಾಗೂ ಡಿವೈಎಸ್ಪಿ ಸಂಕದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

