Breaking News

ಇಡೀ ದೇಶಕ್ಕೆ ಮತ್ತೆ ಶುರುವಾಗಿದೆ ”ಓಮಿಕ್ರಾನ್” ಟೆನ್ಷನ್..! ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ಏರಿಕೆ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೆ 4 ಹೊಸ ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೆಹಲಿಯಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಹಾಗೇ, ರಾಜಸ್ಥಾನದಲ್ಲಿ ಕೂಡ 4 ಕೇಸ್​ ದಾಖಲಾಗಿದ್ದು, ಅಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ತಲುಪಿದೆ. ನಿನ್ನೆ ಗುಜರಾತ್​​ನಲ್ಲಿ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್​ ದೃಢಪಟ್ಟಿತ್ತು.

ಅವರು ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದವರಾಗಿದ್ದು, ಕೊವಿಡ್​ 19 ಪಾಸಿಟಿವ್​ ಬಂದಿತ್ತು. ಮಾದರಿಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಒಮಿಕ್ರಾನ್​ ಇರುವುದು ದೃಢಪಟ್ಟಿತ್ತು. ಹಾಗೇ, ಮಹಾರಾಷ್ಟ್ರದಲ್ಲಿ ಕೂಡ ಇಬ್ಬರು ದುಬೈನಿಂದ ಆಗಮಿಸಿದವರಲ್ಲಿ ಒಮಿಕ್ರಾನ್​ ಇರುವುದು ಗೊತ್ತಾಗಿತ್ತು. ಒಟ್ಟಾರೆ ನಿನ್ನೆ ದೇಶದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 41ಕ್ಕೆ ತಲುಪಿತ್ತು. ಇಂದು ದೆಹಲಿಯಲ್ಲಿ ಪತ್ತೆಯಾದ ನಾಲ್ವರಲ್ಲಿ ಎಲ್ಲರಿಗೂ ಸೌಮ್ಯ ಲಕ್ಷಣವಿದೆ. ದೆಹಲಿಯಲ್ಲಿರುವ ಒಟ್ಟಾರೆ 6 ಸೋಂಕಿತರಲ್ಲಿ ಒಬ್ಬರು ಚೇತರಿಸಿಕೊಳ್ಳುತ್ತಿದ್ದು,

ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯ ದೇಶದಲ್ಲಿ ಮಹಾರಾಷ್ಟ್ರದಲ್ಲಿ 20, ರಾಜಸ್ಥಾನದಲ್ಲಿ 13, ಕರ್ನಾಟಕದಲ್ಲಿ 3, ಗುಜರಾತ್​ನಲ್ಲಿ 4, ದೆಹಲಿಯಲ್ಲಿ 6, ಚಂಡಿಗಢ್​​, ಕೇರಳ, ಆಂಧ್ರಪ್ರದೇಶಗಳಲ್ಲಿ ತಲಾ ಒಂದು ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ. ಈ ಎಲ್ಲ ಸೋಂಕಿತರನ್ನೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಮಿಕ್ರಾನ್​ ಮೊದಲು ಪತ್ತೆಯಾಗಿದ್ದು ಕರ್ನಾಟದಲ್ಲಿ ಆಗಿದ್ದರೂ, ಸದ್ಯ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳಿವೆ.

Share News

About admin

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *