Breaking News

ದೃಷ್ಟಿಹೀನ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ: ಕರ್ನಾಟಕದ ಯುವಕನ ಬಂಧನ

ಕಾಸರಗೋಡು: ಅಪ್ರಾಪ್ತ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 49 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ ಆರೋಪದಡಿ ಕೊಡಗಿನ ಅಯ್ಯಪ್ಪ ವೈ.ಎಸ್. (23) ಎಂಬಾತನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ನಿಲ್ದಾಣದ ಬಳಿಕ ಮಹಿಳೆ ಮತ್ತು ಮಗ ಮಾತ್ರ ಬೋಗಿಯಲ್ಲಿದ್ದ ವೇಳೆ ಆರೋಪಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮಹಿಳೆಯ ಮುಖ ಹಾಗೂ ಕುತ್ತಿಗೆಗೆ ಗಾಯಗಳಾಗಿದ್ದು, ತಕ್ಷಣ ರೈಲಿನ ತುರ್ತು ಸರಪಳಿ ಎಳೆದು ರೈಲು ನಿಲ್ಲಿಸುವ ಮೂಲಕ ತಪ್ಪಿಸಿಕೊಂಡಿದ್ದಾರೆ. ರೈಲು ನಿಂತ ಬಳಿಕ ಬೇರೆ ಬೋಗಿಗೆ ತೆರಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಕಾಸರಗೋಡಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share News

About BigTv News

Check Also

ಯುವತಿಗೆ ಹಣ ಆಮಿಷಯೊಡ್ಡಿ ಲೈಂಗಿಕ ಕಿರುಕುಳ ಆರೋಪ

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಯುವತಿಗೆ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವೇಣೂರು ನಿವಾಸಿ ಸೈಯ್ಯದ್ ಮಹಮ್ಮದ್ ಇಸಾಕ್ …

Leave a Reply

Your email address will not be published. Required fields are marked *