ಬೆಂಗಳೂರು: ಪ್ರೀತಿಸುತ್ತಿದ್ದ ಯುವತಿ ತನ್ನಿಂದ ದೂರಾದಳು ಎಂಬ ಕಾರಣಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಆಕೆಯ ಸಂಬಂಧಿಕರ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ನಡೆದಿದೆ. ನಂದನ್ ಎಂಬಾತ ಈ ಕೃತ್ಯ ಎಸಗಿದ ಆರೋಪಿ. ಯುವತಿ ಮಾತನಾಡಲು ನಿರಾಕರಿಸಿದ್ದರಿಂದ ಭಾನುವಾರ ರಾತ್ರಿ ಆಕೆಯ ಮನೆ ಬಳಿ ತೆರಳಿ ಗಲಾಟೆ ನಡೆಸಿದ್ದಾನೆ. ಮನೆಯವರು ಬಾಗಿಲು ತೆರೆಯದಿದ್ದಾಗ ಕೋಪಗೊಂಡು ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಪಕ್ಕದಲ್ಲಿದ್ದ ಮತ್ತೊಂದು ಬೈಕ್‌ಗೂ ಹಾನಿಯಾಗಿದೆ. ಯುವತಿಯ ಸಂಬಂಧಿ ಸುನಿಲ್ ನೀಡಿದ ದೂರಿನ ಮೇರೆಗೆ ಕೋಣನಕುಂಟೆ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
