ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಜೆಡಿಎಸ್ ಕಾರ್ಯಕರ್ತ ಮೋಹನ್‌ಗೌಡರ ಮನೆಗೆ ಶೋಧ ನಡೆಸಲು ತೆರಳಿದ್ದ ಸಿಸಿಬಿ ಮಹಿಳಾ ಇನ್‌ಸ್ಪೆಕ್ಟರ್ ಜಿ.ಎಂ. ಕವಿತಾ ಅವರ 9 ಗ್ರಾಂ ಚಿನ್ನದ ಬ್ರೇಸ್‌ಲೆಟ್ ನಾಪತ್ತೆಯಾಗಿದೆ. ಅ.23ರಂದು ಶೋಧ ಕಾರ್ಯಾಚರಣೆ ವೇಳೆ ಮೊಬೈಲ್ ನೀಡುವ ವಿಚಾರವಾಗಿ ಮೋಹನ್‌ಗೌಡರ ಪತ್ನಿ ಪವಿತ್ರಾ ಹಾಗೂ ಪಕ್ಕದ ಮನೆಯ ಪವಿತ್ರಾ ಅವರೊಂದಿಗೆ ವಾಗ್ವಾದ ಮತ್ತು ತಳ್ಳಾಟ ನಡೆದಿತ್ತು. ಈ ವೇಳೆ ಕವಿತಾ ಅವರ ಬ್ರೇಸ್‌ಲೆಟ್ ತುಂಡಾಗಿ ಹಾಸಿಗೆ ಮೇಲೆ ಬಿದ್ದಿರುವುದು ವಿಡಿಯೊ ಪರಿಶೀಲನೆಯಲ್ಲಿ ಕಂಡುಬಂದಿದೆ. ಬ್ರೇಸ್‌ಲೆಟ್ ಹಿಂದಿರುಗಿಸದ ಹಿನ್ನೆಲೆಯಲ್ಲಿ ಕವಿತಾ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಹಾಗೂ ಬ್ರೇಸ್‌ಲೆಟ್ ಹಿಂದಿರುಗಿಸದ ಆರೋಪದಡಿ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

