Breaking News

ಮೂವರು ಮೊಬೈಲ್ ಕಳ್ಳರ ಬಂಧನ: ಗೋಕುಲ ರೋಡ್ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಹುಬ್ಬಳ್ಳಿ: ಸಂತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಮೂವರು ಕಳ್ಳರನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿತರಿಂದ 6 ಲಕ್ಷ ರೂ. ಮೌಲ್ಯದ 25 ಮೊಬೈಲ್ ಫೋನ್‌ಗಳು ಹಾಗೂ ಅಟೋ ರಿಕ್ಷಾ ವಶಕ್ಕೆ ಪಡೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹುಲಗಿನಕೊಪ್ಪದ ಹನುಮಂತಪ್ಪ ಬಂಡಿವಡ್ಡರ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕುಮಾರ ಕುಳ್ಳ ಹಾಗೂ ಹುಬ್ಬಳ್ಳಿ ಜಗದೀಶ ನಗರದ ಸೋಮಶೇಖರ ಕುಂದಗೋಳ ಬಂಧಿತ ಆರೋಪಿಗಳು.

ನಗರದ ವಿವಿಧ ಮಾರುಕಟ್ಟೆ, ಅಳ್ಳಾವರ, ಎಂ.ಕೆ. ಹುಬ್ಬಳ್ಳಿ, ಬೆಳಗಾವಿ, ಗೋಕಾಕ, ಯರಗಟ್ಟಿ, ಕಲಬುರಗಿ, ಮೈಸೂರು, ಬಳ್ಳಾರಿ, ಸೇರಿದಂತೆ ರಾಜ್ಯದ ವಿವಿಧೆಡೆ ಸಂತೆಗಳಲ್ಲಿ ಮೊಬೈಲ್ ಕದಿಯುತ್ತಿದ್ದರು. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪರ್ಸ್, ಮೊಬೈಲ್ ಕದಿಯುತ್ತಿದ್ದರು. ಖಚಿತ ಮಾಹಿತಿ ಕಲೆಹಾಕಿದ ಗೋಕುಲ ರೋಡ್ ಪೊಲೀಸರು ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್‌ಐಗಳಾದ ಎಂ.ಕೆ. ಕಾಳೆ, ವಿಶ್ವನಾಥ ಇನ್‌ಸ್ಪೆಕ್ಟರ್ ಜೆ.ಎಂ. ಎಂ.ಎ., ಸಿಬ್ಬಂದಿ ಆರ್.ಆರ್. ಹೊಂಕಣದವರ, ಎನ್.ಐ. ಕಾಲಿಮಿರ್ಚಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ನೀಲಗಾರ, ಬಿ.ಎಫ್. ಬೆಳಗಾವಿ ಇತರರು ತಂಡದಲ್ಲಿದ್ದರು.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *