Breaking News
Featured Video Play Icon

ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಇರಿಸಲು ಮುಂದಾದ ಭೂಪರು: ಎಕ್ಸಕ್ಲೂಸಿವ್ ಮಾಹಿತಿ ಇಲ್ಲಿದೆ ನೋಡಿ..!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಿನಿಮಾ ಶೈಲಿಯಲ್ಲಿ ಗಾಂಜಾ ಕೇಸ್ ಪತ್ತೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆ ಕಪ್ಪು ಚುಕ್ಕೆ ತರಲು ಯತ್ನಿಸಿದ ಭೂಪನ ಬಣ್ಣ ಬಯಲಾಗಿದೆ. ತನ್ನ ವಯಕ್ತಿಕ ದ್ವೇಷಕ್ಕೆ ಪೊಲೀಸ್ ಸಿಬ್ಬಂದಿ ಬಲಿ ಕೊಟ್ಟ ಭೂಪನ ರೋಚಕ ಸ್ಟೋರಿ ತೋರಸ್ತಿವಿ ನೋಡಿ..ಕಿರಾಣಿ ಶಾಪ್ ವೊಂದರಲ್ಲಿ ತಾನೆ ಗಾಂಜಾಯಿಟ್ಟು ತಾನೆ ಪೊಲೀಸರಿಗೆ ಮಾಹಿತಿ ಕೊಟ್ಟ ಕಿರಾತಕ, ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸೂರಿನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಸಂಜು ಪಾಟೀಲ್ ಗಾಂಜಾ ನಕಲಿ ಪ್ರಕರಣ ಪ್ರಮುಖ ಆರೋಪಿಯಾಗಿದ್ದು, ಕಿರಾಣಿ ಶಾಪ್ ಮಾಲೀಕ ಚಂದ್ರು ಅಣ್ಣಿಗೇರಿ ಮೇಲೆ ವಯಕ್ತಿಕ ದ್ವೇಷ ಹೊಂದಿದ್ದ ಸಂಜು ಪಾಟೀಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಇನ್ನೂ ಈ ತಿಂಗಳ 8 ರಂದು 4 ಗಂಟೆಗೆ ಗ್ರಾಹಕ ಸೋಗಿನಲ್ಲಿ ಶಾಪ್ ಒಳಗೆ ತೆರಳಿ ಒಂದು ಪ್ಯಾಕೆಟ್ ಗಾಂಜಾಯಿಟ್ಟು ಬಂದಿದ್ದ, ಸಂಜೆ ಕೇಶ್ವಾಪುರ ಪೊಲೀಸರಿಗೆ ಕರೆ ಮಾಡಿ ಚಂದ್ರು ಅಂಗಡಿಯಲ್ಲಿ ಗಾಂಜಾ ಇರುವ ಬಗ್ಗೆ ತಾನೆ ಮಾಹಿತಿ ನೀಡಿದ್ದ, ಸಂಜು ಮಾಹಿತಿ ಆಧಾರಿಸಿ ಶಾಪ್ ಮೇಲೆ ದಾಳಿ ಮಾಡಿ ಗಾಂಜಾ ವಶಕ್ಕೆ ಪಡೆದಿದ್ದ ಪೊಲೀಸರು ತನ್ನ ಶಾಪ್ ಮಾಲೀಕನಿಗೆ ತನ್ನ ಅಂಗಡಿಯಲ್ಲಿ ಗಾಂಜಾ ಇರುವುದ ತಿಳಿದಿರಲಿಲ್ಲ. ಇತ್ತ ಪೊಲೀಸರಿಗೂ ಸಂಜು ಪಾಟೀಲ್ ಗಾಂಜಾ ಇಟ್ಟಿರುವ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಪೊಲೀಸರೇ ಬಂದು ಗಾಂಜಾಯಿಟ್ಟು ಫೇಕ್ ಪ್ರಕರಣ ದಾಖಲಿಸಕೊಂಡಿದ್ದಾರೆ ಅಂತ ಪೊಲೀಸರ ವಿರುದ್ಧ ದೂರಿದ್ದ ಅಂಗಡಿ ಮಾಲೀಕರು, ಆರಂಭದಲ್ಲಿ ಪೊಲೀಸರ ಮೇಲೆ ಅನುಮಾನ ಮೂಡಿತ್ತು. ಆದರೆ ಅಂಗಡಿಯಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಹೊರ ಬಿದ್ದ ಅಸಲಿಯತ್ತು ಬಯಲಿಗೆ ಬಂದಿದೆ.ಸಂಜು ಪಾಟೀಲ್ ಗಾಂಜಾಯಿಟ್ಟು ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಸಂಜು ಪಾಟೀಲ್ ಬಂಧನವಾಗಿದ್ದು, ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *