ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಕೊನೆಗೂ ಪ್ರಕಟವಾಗಿದೆ. ಅರಮನೆ ಮೈದಾನದಲ್ಲಿ ತಡರಾತ್ರಿ 12 ಗಂಟೆಯ ತನಕ ಮತ ಎಣಿಕೆ ನಡೆದಿದ್ದು, ಚುನಾವಣಾಧಿಕಾರಿ ರವೀಂದ್ರ ಅವರು ವಿಜೇತರ ಘೋಷಣೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ಮೊದಲ ಬಾರಿಗೆ ಒಕ್ಕಲಿಗ ಸಂಘದ ಫಲಿತಾಂಶ ಒಂದೇ ದಿನದಲ್ಲಿ ಮುಗಿದಿದ್ದು,
ಪಾರದರ್ಶಕವಾಗಿ ಫಲಿತಾಂಶ ನೀಡಿದ್ದೇವೆ ಎಂದು ಹೇಳಿದ್ದರು. ಇನ್ನೂ ಜಿಲ್ಲೆಯಾದ್ಯಂತ ಅಭ್ಯರ್ಥಿಗಳ ಫಲಿತಾಂಶ ಕೈ ಸೇರಿದ್ದು, ರಾಜ್ಯಾದ್ಯಂತ 35 ಕಾರ್ಯಕಾರಿ ಸಮಿತಿಗೆ ಆಯ್ಕೆ ಆಗಿದ್ದಾರೆ ಅಂತ ತಿಳಿಸಿದರು. ಇನ್ನೂ ಅಧ್ಯಕ್ಷ ಸ್ಥಾನದ ಆಯ್ಕೆಗೆ ಸಭೆ ಕರೆದು ದಿನಾಂಕ ನಿರ್ಧಾರ ಮಾಡುತ್ತೇವೆ ಎಂದು ರವೀಂದ್ರ ಅವರು ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

