ಚಿತ್ರದುರ್ಗ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು, ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಡಲಗಿರಿಯಪ್ಪ(35) ಬಂಧಿತ ಆರೋಪಿ. ಹೊಸದುರ್ಗ ತಾಲ್ಲೂಕಿನ ಪಾಣಿ ಕಿಟ್ಟದಹಳ್ಳಿ ಗ್ರಾಮದವನಾಗಿರುವ ಮೂಡಲಗಿರಿಯಪ್ಪ, ನಗರದ ವಿವೇಕಾನಂದ ನಗರದ ಅಪ್ರಾಪ್ತ ಬಾಲಕಿಯ ಮನೆ ಮುಂಭಾಗದಲ್ಲಿ ವಾಸವಾಗಿದ್ದ, ಅಪ್ರಾಪ್ತ ಬಾಲಕಿಯನ್ನು ಬಟ್ಟೆ ತೊಳೆದುಕೊಂಡು ಬರೋಣ ಎಂದು ಪುಸಲಾಯಿಸಿ ಹತ್ತಿರದಲ್ಲಿ ಇದ್ದ ಗುಡ್ಡಕ್ಕೆ ಕರೆದುಕೊಂಡು ಹೋಗಿ, ಯಾರು ಇಲ್ಲದ ಸಮಯದಲ್ಲಿ ಬಾಲಕಿಯ ಕೈ ಕಾಲಿಗೆ ಹಗ್ಗ ಕಟ್ಟಿ ಬಲತ್ಕಾರದಿಂದ ಅತ್ಯಾಚಾರ ನಡೆಸಿ, ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಪರಾರಿಯಾಗಿದ್ದಾನೆ.

ನಂತರ, ಬಾಲಕಿ ನಡೆದ ಘಟನೆಯನ್ನು ತಂದೆ-ತಾಯಿ ಹಾಗೂ ಸಂಬಂಧಿಕರ ಬಳಿ ತಿಳಿಸಿದಾಗ, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕೂಡಲೇ ಸಿಪಿಐ ಶ್ರೀಧರ್ ಶಾಸ್ತ್ರೀ ಅವರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಪೊಲೀಸರ ತಂಡದೊಂದಿಗೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಿ, ಆರೋಪಿ ಮೂಡ್ಲಪ್ಪ ಅಲಿಯಾಸ್ ಮೂಡಲಗಿರಿಯಪ್ಪ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಅವರು ಶ್ಲಾಘಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

