Breaking News

ಆಂಧ್ರಪ್ರದೇಶ : ತಿರುಮಲದಲ್ಲಿ ನಮಾಜ್ ಮಾಡಿದ ವ್ಯಕ್ತಿ!

ತಿರುಪತಿ ತಿರುಮಲ ಕಲ್ಯಾಣ ಮಂಟಪದ ಬಳಿ ವ್ಯಕ್ತಿಯೋರ್ವ ಹಜರತ್ ಟೋಪಿ ಎಂದು ಹೇಳಲಾಗುತ್ತಿರುವುದನ್ನು ಧರಿಸಿ ಸುಮಾರು 10 ನಿಮಿಷಗಳಿಗೂ ಹೆಚ್ಚು ಕಾಲ ನಮಾಜ್ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.ತಿರುಮಲ ಬೆಟ್ಟಕ್ಕೆ ಬರುವ ವಾಹನಗಳ ಮೇಲೆ ಇತರ ಧರ್ಮಗಳ ಚಿಹ್ನೆಗಳಿದ್ದರೂ ಸಹ ಅವುಗಳನ್ನು ಅನುಮತಿಸಲಾಗಲ್ಲ. ತಿರುಮಲ ಬೆಟ್ಟದಲ್ಲಿ ಅನ್ಯಧರ್ಮೀಯರ ಫೋಟೋಗಳನ್ನು, ಇತರ ಧರ್ಮದ ಜನ ಪ್ರಾರ್ಥನೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.ಹೀಗಿರುವಾಗ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮುಸ್ಲಿಂ ಎನ್ನಲಾದ ವ್ಯಕ್ತಿಯು ನಮಾಜ್ ಮಾಡಿದ್ದು, ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂದು ಶ್ರೀವಾರಿಯ ಕೆಲ ಭಕ್ತರು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *