Breaking News

ಸದನದಲ್ಲಿ ರಮೇಶಕುಮಾರ ಹೇಳಿಕೆ ಸರಿಯಲ್ಲ.ಈ ಬಗ್ಗೆ ಸ್ಪಷ್ಟೀಕರಣ ಕೋಡಬೇಕು- ಜಗದೀಶ ಶೆಟ್ಟರ್

ಹುಬ್ಬಳ್ಳಿ: ಸದನದಲ್ಲಿ ಮಾಜಿ ಸಚಿವ ರಮೇಶ ಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರ.ಸದನದಲ್ಲಿ ರಮೇಶ್ ಕುಮಾರ ಅವರಂತಹ ಹಿರಿಯರು ಆ ರೀತಿ ಹೇಳಬಾರದಾಗಿತ್ತು.ಅವರು ಯಾಕೆ ಹೇಳಿದ್ರು ಅಂತ ಅರ್ಥ ಆಗಲಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿಕ್ರಿಯೆ ನೀಡಿದರು.

ಈ ರೀತಿ ಶಬ್ದ ಪ್ರಯೋಗ ಅಥವಾ ಮಹಿಳೆಯರ ಬಗ್ಗೆ ಮಾತನಾಡೋದು ಸರಿ ಅಲ್ಲ.ರಮೇಶ್ ಕುಮಾರ್ ಈ ಬಗ್ಗೆ ಸ್ಪಷ್ಟಿಕರಣ ಕೊಡಬೇಕು.ನಿನ್ನೆಯೇ ಆ ಬಗ್ಗೆ ಕ್ಷಮೆ ಕೇಳಬೇಕಿತ್ತು, ಇವತ್ತು ಕೇಳಿದ್ದಾರೆ‌.ಒಳ್ಳೆ ರೀತಿಯ ಸಂಸದೀಯ ಪಟು ಆಗಿದ್ದವರ ನಡುವಳಿಕೆ ಇದಲ್ಲ.ಅವರು ಒಬ್ಬ ಸ್ಪೀಕರ್ ಆಗಿ ಕೆಲಸ ಮಾಡಿದವರು.ಮಾತನಾಡುವಾಗ ಬಹಳಷ್ಟು ಯೋಚಿಸಿ ಮಾತನಾಡಬೇಕಿತ್ತು.ಸದನದಲ್ಲಿ ನಾವು ಸರ್ಕಾರ ನಡೆಸೋಕೆ, ಉತ್ತರ ಕೊಡೋಕೆ ಸಿದ್ಧವಾಗಿರ್ತೀವಿ.

ಸ್ಪಷ್ಟವಾಗಿ ಅವರು ಯವುದನ್ನ ಮಂಡಿಸಬೇಕು ಅನ್ನೋದನ್ನ ಅವರು ಅರ್ಥ ಮಾಡಿಕೊಳ್ಳಬೇಕು.ಸದನದಲ್ಲಿ ಧರಣಿ ಮಾಡುವುದು, ಬಾಯ್ಕಾಟ್ ಮಾಡೋದು, ಬೀದಿಲಿ ಪ್ರತಿಭಟನೆ ಮಾಡೋದೆಲ್ಲ ಕಾಂಗ್ರೆಸ್ ನ ರಾಜಕೀಯ ಗಿಮಿಕ್.ಈ ಭಾಗದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸರ್ಕಾರಕ್ಕೆ ಸಲಹೆ ನೀಡಿ.ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಆದ್ರೆ ಅದಕ್ಕೆ ಯಾವುದೇ ಆದಾರ ಇಲ್ಲ.ಸರಿಯಾಗಿ ಸದನ ನಡೆಯದೇ ಇರೋದಕ್ಕೆ ಕಾಂಗ್ರೆಸ್ಸಿಗರ ಅಸಹಕಾರ ಕಾರಣ

ಮತಾಂತರ ನಿಷೇದ ಕಾಯ್ದೆ ವಿಚಾರ.

ಸ್ವಯಂಪ್ರೇರಿತ ಮತಾಂತರಕ್ಕೆ ಯಾವುದೇ ನಿರ್ಬಂಧ ಇಲ್ಲ.ಆದ್ರೆ ಬಲವಂತವಾಗಿ ಇವತ್ತು ಮತಾಂತರ ನಡೆಯುತ್ತಿದೆ.ಆಸೆ, ಆಮೀಷ ಒಡ್ಡಿ ಮತಾಂತರ ಮಾಡುವುದಕ್ಕೆ ನಮ್ಮ ತಡೆ ಇದೆ.ಯಾವುದೇ ಸಮುದಾಯ ಇರಲಿ ಮತಾಂತರ ನಿಷೇಧ ಕಾಯ್ದೆ ಕಾಂಗ್ರೆಸ್ ಗೆ ಯಾಕೆ ಅನ್ವಯವಾಗುತ್ತೆ.ಬಿಲ್ ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಅಂತ ಇರೋದಿಲ್ಲ.ನೀವು ತಪ್ಪು ಮಾಡದಿದ್ದರೆ ಹೆದರುವ ಪ್ರಶ್ನೆಯೇ ಇಲ್ಲ.ಮಹಾದಾಯಿ ವಿಚಾರದಲ್ಲಿ ಕೆಲ ಕಾನೂನು ತೊಡಕಿದೆ.ಕೋರ್ಟ್ ನಲ್ಲಿ ಕೇಸ್ ಪೆಂಡಿಂಗ್ ಇದೆ, ಸರ್ಕಾರದ ಹಂತದಲ್ಲಿ ಬಗೆಹರೆಸಬೇಕಾಗುತ್ತೆ.ನ್ಯಾಯಾಲಯದಲ್ಲಿ ನಮಗೆ ಮಹದಾಯಿ ನೀರಿನ ಬಗ್ಗೆ ಹಕ್ಕಿದೆ ಅನ್ನೋ ತೀರ್ಪು ಬಂದಿದೆ.ನಮಗೆ ಬರಬೇಕಾದ ನೀರು ನಮಗೆ ಬರೋದು ನಿಶ್ಚಿತ

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *