Breaking News

ನೈಟ್ ಕರ್ಪ್ಯೂಗೆ ಬೆಂಗಳೂರು ಪೊಲೀಸ್ ಹಾಗೂ ಪಾಲಿಕೆ ಸಿದ್ಧತೆ

ಬೆಂಗಳೂರು:ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಹಿನ್ನಲೆ ನಗರ ಪೊಲೀಸ್ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರು ಆಯಕ್ಟೀವ್ ಆಗಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಎಲ್ಲಾ ಡಿಸಿಪಿಗಳ ಜೊತೆ ಸಭೆ ನಡೆಸಿ ಕರ್ಪ್ಯೂ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ರು.

ಯಾವೆಲ್ಲ ಬಂದೋಬಸ್ತ್ ಮಾಡಿಕೊಳ್ಳಬೇಕು, ಎಲ್ಲೆಲ್ಲಿ ಬ್ಯಾರಿಗೇಟ್ ಹಾಕ್ಬೇಕು, ನೈಟ್ ಕರ್ಪ್ಯೂ ಉಲ್ಲಂಘನೆ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಅನ್ನೋ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ‌.

ಬಾರ್, ಪಬ್ , ರೆಸ್ಟೋರೆಂಟ್ ಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಸೂಚನೆ ನೀಡಿರುವ ಆಯಕ್ತರು, ಯಾವುದೇ ಕಾರಣಕ್ಕೂ ರಾತ್ರಿ 10 ಗಂಟೆ ಬಳಿಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಇರದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ಮಧ್ಯಾಹ್ನ ದಿಂದಲೆ ಮೈಕ್ ಮೂಲಕ ನೈಟ್ ಕರ್ಪ್ಯೂ ಬಗ್ಗೆ ಅನೌನ್ಸ್ ಮಾಡುವಂತೆ ಹೇಳಿರೋ ಕಮೀಷನರ್, ಹೊಯ್ಸಳಗಳು ಸದಾ ಗಸ್ತಿನಲ್ಲಿ ಇರುವಂತೆ ಸೂಚಸಿದ್ದಾರೆ.

Share News

About admin

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *