ಹುಬ್ಬಳ್ಳಿ : ರಾಜ್ಯಾದ್ಯಂತ ವಕ್ಸ್ ಗೊಂದಲ ವಿಚಾರ, ಇದು ರಾಜ್ಯ ಸರ್ಕಾರದ ಮಿಸ್ ಮ್ಯಾನೇಜೆಂಟ್. ಸರ್ಕಾರದ ಅವ್ಯವಸ್ಥೆಗೆ ಇದು ಸ್ಪಷ್ಟ ಉದಾಹರಣೆ. ವಕ್ಸ್ ಆಸ್ತಿ ಬಗ್ಗೆ ನೋಟಿಸ್ ಕೊಟ್ಟಿದ್ದು ರಾಜ್ಯ ಸರ್ಕಾರ ಆಡಳಿತ ವೈಫಲ್ಯ. ಇದನ್ನು ಯಾರು ಕೇಳದಿದ್ದೆ ಅದು ವಕ್ಸ್ ಬೋರ್ಡ್ ಆಸ್ತಿ ಆಗುತ್ತಿತ್ತು.ಬೋರ್ಡ್ ಗೆ ಆಸ್ತಿ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟಿಕರಣ ಹೀನ ಮಟ್ಟಕ್ಕಿಳಿದಿದೆ ಎಂದು ಸಂಸದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದು ಅಲ್ಪ ಸಂಖ್ಯಾತರ ತುಷ್ಟಿಕರಣ.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರತಿ ಬಾರಿ ತಪ್ಪು ಹೆಜ್ಜೆ ಇಡುತ್ತಿದೆ. ಈ ಕೂಡಲೇ ರೈತರಿಗೆ ನೀಡಿರುವ ನೋಟಿಸ್ ವಾಪಸು ಪಡೆಯಬೇಕು. ರೈತರ ಕ್ಷಮೆಯಾಚನೆ ಮಾಡಬೇಕು ಎಂದ ಶೆಟ್ಟರ್. ಇದು ರೈತರ ಜಮೀನು ಕಬಳಿಸುವ ತಂತ್ರ.
ಇದರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ನಮ್ಮ ಕಾಲದಲ್ಲಿ ಒಂದೋ ಎರಡು ಪ್ರಕರಣ ಆಗಿರಬಹುದು ಅದನ್ನು ಸ್ಥಳಿಯ ಅಧಿಕಾರಿಗಳನ್ನು ಕೇಳಬೇಕು. ರೈತರ ಹಿತಾಸಕ್ತಿ ಕಾಪಾಡಲು, ತುಷ್ಟಿಕರಣ ಖಂಡಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

