ಧಾರವಾಡ:ರಾಮನಗರದಲ್ಲಿ ನಡೆದ ರಾಜಕೀಯ ಬೆಳವಣಿಗೆ , ಕಾಂಗ್ರೆಸ್ಸ್ ನ ಡಿ ಕೆ.ಸಿ ಸಹೋದರರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಹು – ಧಾ ಮಹಾನಗರ ಜಿಲ್ಲಾ ವತಿಯಿಂದ ಹು- ಧಾ ಪಶ್ಚಿಮ -74 , ಹಾಗು ಧಾರವಾಡ 71 ರ ಸಹಯೋಗದಲ್ಲಿ ಇಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು.
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 2 ಪ್ರತಿಮೆಗಳ ಲೋಕಾರ್ಪಣೆ ಕಾರ್ಯಕ್ರಮ ಸಂದರ್ಭದಲ್ಲಿ ಸ್ಥಳೀಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ ಕೆ ಸುರೇಶ್ ಅವರು ಏಕಾಏಕಿ ತಮ್ಮ ಪಟಾಲಂನೊಂದಿಗೆ ಗೂಂಡಾ ಕಾಂಗ್ರೆಸ್ ಗೂಂಡಾ ಕಾರ್ಯಕರ್ತರೊಂದಿಗೆ ವೇದಿಕೆಗೆ ನುಗ್ಗಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತೊಡೆತಟ್ಟಿ , ರೌಡಿ ಗೂಂಡಾ ರೀತಿಯಲ್ಲಿ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದು ಅಕ್ಷಮ್ಮೆ ಅಪರಾಧವಾಗಿದೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.
ಪ್ರತಿಭಟನೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಪವನ್ ಥಿಟೆ, ವಿಜಯ್ ಸಾಬಳೆ , ವಿಶ್ವೇಶ್ವರಿ ಅಳಗವಾಡಿ, ಪುಪ್ಪಾ ನವಲಗುಂದ, ರೇಣುಕಾ ಕೋಳೆಕರ, ಮಾಲತಿ ಹುಲಕಟ್ಟಿ,ಶೂಭಾ ಭುಜಂಗನವರ. ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

