Breaking News

ಬೆಂಗಳೂರುನಲ್ಲಿ ಬೆಳ್ಳಗ್ಗೆ ಬೆಳ್ಳಗ್ಗೆ ಜೆಸಿಬಿ ಘರ್ಜನೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿlandಕಾರ ತನ್ನ ಸ್ವತ್ತನ್ನು ಮರು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಇಂದು ಬೆಳಗ್ಗೆ ರಾಜಾಜಿನಗರ 6ನೆ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ ಬಳಿ ಇದ್ದ 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ಅಭಿವೃದ್ಧಿ ಸಂಬಂಧ ಬಿಡಿಎ ಹಲವು ದಶಕಗಳ ಹಿಂದೆ ಸರ್ವೆ ಸಂಖ್ಯೆ 18/1 ರಿಂದ 18/10ರ ವರೆಗಿನ ಸುಮಾರು ಒಂದು ಎಕರೆ ಜಾಗವನ್ನು ಸ್ವಾೀಧಿನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರವನ್ನೂ ನೀಡಿತ್ತು. ಆದರೆ, ಕೆಲವರು ಈ ಜಾಗದಲ್ಲಿ ಅಕ್ರಮವಾಗಿ ತಾತ್ಕಾಲಿಕ ಶೆಡ್, ಗ್ಯಾರೇಜ್‍ಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಸದರಿ ಜಾಗವನ್ನು ತೆರವು ಮಾಡುವಂತೆ ಹಲವು ಬಾರಿ ನೊಟೀಸ್ ನೀಡಿದ್ದರೂ ತೆರವು ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಸೂಚನೆ ಮೇರೆಗೆ ಕಾರ್ಯಪಾಲಕ ಅಭಿಯಂತರರಾದ ಸುಷ್ಮಾ, ಎಸ್‍ಪಿ ಭಾಸ್ಕರ್, ಡಿವೈಎಸ್‍ಪಿ ರವಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬ¸್ತïನಲ್ಲಿ ತಾತ್ಕಾಲಿಕ ಶೆಡ್, ಗ್ಯಾರೇಜ್‍ಗಳನ್ನು ತೆರವುಗೊಳಿಸಿ ಜಾಗವನ್ನು ಬಿಡಿಎ ವಶಕ್ಕೆ ತೆಗೆದುಕೊಳ್ಳಲಾಯಿತು.

Share News

About admin

Check Also

ಮಣಿಪಾಲ: ರಸ್ತೆಯಲ್ಲೇ ಗುಂಪು ಕಟ್ಟಿ ಮಾರಾಮಾರಿ; ವೈರಲ್ ವಿಡಿಯೊ ಆಧರಿಸಿ 11 ಯುವಕರ ವಿರುದ್ಧ ಪ್ರಕರಣ ದಾಖಲು

ಮಣಿಪಾಲದ ಈಶ್ವರನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 169(A) ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಈ …

Leave a Reply

Your email address will not be published. Required fields are marked *