Breaking News

ಕೋವಿಡ್‌ ಕಂಟಕದಿಂದ ಮತ್ತೆ ಆನ್‌ಲೈನ್‌ ಕ್ಲಾಸ್‌..?

ಬೆಂಗಳೂರು: ಕೋವಿಡ್‌ ಹೆಚ್ಚಳ ಹಿನ್ನೆಲೆ ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ ಶಾಲೆಗಳನ್ನು ಆನ್‌ಲೈನ್‌/ಆಫ್ ಲೈನ್‌ ಸೇರಿ ಎರಡರಲ್ಲಿ ಶಾಲೆಗಳಿಗೆ ಅನುಕೂಲವಾಗುವುದರಲ್ಲಿ ತರಗತಿಗಳನ್ನು ನಡೆಸಲು ಸರಕಾರ ಈಗಾಗಲೇ ಅವಕಾಶ ನೀಡಿದೆ.

ಬೆಂಗಳೂರು ಸಹಿತ ವಿವಿಧ ಭಾಗಗಳ ಕೆಲವು ಖಾಸಗಿ ಶಾಲೆಗಳು ಶುಕ್ರವಾರದಿಂದಲೇ (ಜ.6) ಆನ್‌ಲೈನ್‌ ತರಗತಿಗಳನ್ನು ನಡೆಸಲು ನಿರ್ಧರಿಸಿದ್ದು, ಮಕ್ಕಳು ಮತ್ತು ವಿದ್ಯಾರ್ಥಿಗಳು ಶಾಲೆಗೆ ಬಾರದಂತೆ ಸೂಚನೆ ನೀಡಿವೆ.

ಕೋವಿಡ್‌ ಹೆಚ್ಚಳದ ನಡುವೆ ಶಿಕ್ಷಕರ ವಿರೋಧ ಯಾಕೆ?
ಶಾಲಾ ಕೊಠಡಿಗಳಲ್ಲಿ ಮಕ್ಕಳೊಂದಿಗೆ ಮಾತನಾಡಿಕೊಂಡು ಬೋಧಿಸುವಂತೆ ಮನೆಯಿಂದ ಪಾಠ-ಪ್ರವಚನಗಳನ್ನು ಮಾಡಲು ಸಾಧ್ಯವಿಲ್ಲ. ಎಲ್ಲ ಮನೆಗಳಲ್ಲಿ ಬೋಧನಾ ವಾತಾವರಣ ಇರುವುದಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಚಿಕ್ಕ-ಪುಟ್ಟ ಮನೆಗಳಲ್ಲಿ ಶಿಕ್ಷಕರು ನೆಲೆಸಿರುತ್ತಾರೆ. ಕುಟುಂಬದೊಂದಿಗೆ ನೆಲೆಸಿರುವುದರಿಂದ ಹಿರಿಯರು- ಮಕ್ಕಳು ಇರುತ್ತಾರೆ. ತಮಗಾಗಿ ಎಲ್ಲರೂ ಪ್ರಶಾಂತವಾಗಿ ಕುಳಿತುಕೊಳ್ಳಬೇಕಾಗುತ್ತದೆ. ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಶಾಲೆಯಿಂದಲೇ ಪಾಠ ಮಾಡಲು ಅನುಕೂಲ ಕಲ್ಪಿಸಬೇಕು ಒಂದು ಆಗ್ರಹಿಸಿದ್ದಾರೆ.

ಇದರ ಜತೆಗೆ ಮನೆಯಿಂದ ಆನ್‌ಲೈನ್‌ ಪಾಠ ಮಾಡುವ ವೇಳೆ ಬೋಧನೆ ಜತೆಗೆ ವೀಡಿಯೋಗಳ ಎಡಿಟಿಂಗ್‌ ಸಹಿತ ಹಲವು ತಾಂತ್ರಿಕ ಕೆಲಸಗಳು ಇರುತ್ತವೆ. ಎಲ್ಲ ಶಿಕ್ಷಕರು ತಾಂತ್ರಿಕವಾಗಿ ಕೌಶಲ ಹೊಂದಿರುವುದಿಲ್ಲ. ಆದ್ದರಿಂದ ಆಫ್ಲೈನ್‌ನಲ್ಲಿಯೇ ಭೌತಿಕ ತರಗತಿಗಳನ್ನು ನಡೆಸಬೇಕು ಎಂಬುದು ಶಿಕ್ಷಕರ ಆಗ್ರಹ ಕೇಳಿಬರುತ್ತಿದೆ. ಒಟ್ಟಾರೆಯಾಗಿ ದೇಶಾದ್ಯಂತ ಕೋವಿಡ್‌ ಸೋಂಕಿನ ತೀವ್ರತೆ ಹೆಚ್ಚಳ ಮತ್ತು ವಿದ್ಯಾರ್ಥಿಗಳ ಹಿತದೃಷ್ಠಿಯನ್ನು ಗಮನ ಹರಿಸಿದರೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿರೋದಂತೂ ನಿಜ.

Share News

About admin

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *