ಹುಬ್ಬಳ್ಳಿ ಚತುರ್ಥಿಯ ಹಬ್ಬವನ್ನು ಅರ್ಥ ಪೂರ್ಣವಾಗಿ ಮಣ್ಣಿನ ಗಣೇಶ ಮೂರ್ತಿ ಪ್ರತಷ್ಠಾಪನೆ ಮಾಡುವ ಮೂಲಕ ಮಾದರಿ ಆಗೋಣ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಮನವಿ ಮಾಡಿದ್ದಾರೆ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ವಿಗ್ರಹಗಳನ್ನ ತಿರಸ್ಕರಿಸಿ , ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಕೆರೆಗಳು,

ನದಿಗಳು ಮತ್ತು ಸಮುದ್ರದ ನೀರು ವಿಷಪೂರಿತವಾಗಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಈ ವರ್ಷ ಮರುಬಳಕೆಯ ಕಾಗದ, ನೈಸರ್ಗಿಕ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶನನ್ನು ಮನೆಗೆ ತನ್ನಿ ಇತರ ನೈಸರ್ಗಿಕವಾಗಿ ಹಬ್ಬ ಆಚರಿಸಿ, ಈ ವರ್ಷ ಒಂದು ಬದಲಾವಣೆ ಆಗಲಿ ಎಂದು ರಜತ್ ಉಳ್ಳಾಗಡ್ಡಿ ಮಠ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

